ನವದೆಹಲಿ, ಫೆ 23(DaijiworldNews/AA): ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಬಳಸಿಕೊಂಡು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ಕೇಜ್ರಿವಾಲ್ ಅವರನ್ನು ಬಂಧಿಸಲು ಕೇಂದ್ರ ಸರ್ಕಾರ ತಂತ್ರ ಹೆಣೆಯುತ್ತಿದೆ ಎಂದು ದೆಹಲಿ ಸಚಿವ ಗೋಪಾಲ್ ರಾಯ್ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿಆರ್ ಪಿಸಿ ಸೆಕ್ಷನ್ 41ಎ ಅಡಿಯಲ್ಲಿ ಸಿಬಿಐ ನೋಟಿಸ್ ಜಾರಿ ಮಾಡಲು ಯೋಜಿಸುತ್ತಿದೆ. ಇಡಿ ನೀಡಿದ ಎಲ್ಲಾ ಸಮನ್ಸ್ ಗಳು ವಿಫಲವಾದ ಹಿನ್ನೆಲೆ ಸಿಬಿಐ ಅನ್ನು ದುರುಪಯೋಗಪಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಇಂಡಿಯಾ ಬಣ ರಚನೆಯಾದ ಬಳಿಕ ಬಿಜೆಪಿ ವಿಚಲಿತಗೊಂಡಿದೆ. ಸಿಬಿಐ ಬಳಸಿ ನೋಟಿಸ್ ನೀಡುವ ಮೂಲಕ ಕೇಜ್ರಿವಾಲ್ ಅವರನ್ನು ಕೇಂದ್ರ ಸರ್ಕಾರ ಯೋಜಿಸಿದೆ. ಸಿಆರ್ ಪಿಸಿ ಸೆಕ್ಷನ್ 41ಎ ಅಡಿಯಲ್ಲಿ ನೋಟಿಸ್ ನೀಡಿ ಬಂಧಿಸುವ ಯೋಜನೆ ಇದೆ ಎಂದು ನಮಗೆ ಮಾಹಿತಿ ಬಂದಿದೆ ಎಂದು ಅವರು ತಿಳಿಸಿದರು.
ಇನ್ನು ಎಎಪಿ ನಾಯಕರಿಗೆ ಸಂಬಂಧಿಸಿದ ಅನೇಕ ಪ್ರದೆಶಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಆದರೂ ಎಎಪಿ ನಾಯಕರಿಗೆ ಸಂಬಂಧಿಸಿದ ಯಾವುದೇ ಭ್ರಷ್ಟಾಚಾರ ಸಾಬೀತು ಮಾಡಲು ಸಾಕ್ಷ್ಯಗಳು ದೊರೆತಿಲ್ಲ. ಬಿಜೆಪಿ ಹಾಗೂ ತನಿಖಾ ತಂಡದ ಬೆದರಿಕೆಗೆ ಎಎಪಿ ಹೆದರುವುದಿಲ್ಲ. ಇಂಡಿಯಾ ಬಣದ ಮೈತ್ರಿ ಪಕ್ಷವಾಗಿ ಎಎಪಿ ಚುನಾವಣಾ ಕಣಕ್ಕೆ ಇಳಿಯಲಿದೆ ಎಂದು ಅವರು ಹೇಳಿದರು.