ಬೀದರ್, ಫೆ 23(DaijiworldNews/SK): ಇಚರ್ ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 14.26 ಲಕ್ಷ ರೂಪಾಯಿ ನಗದು ಸಹಿತ ವಾಹನವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೀದರ್ ನ ಹುಲಸೂರು ತಾಲೂಕಿನ ಅಂಬೇವಾಡಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಲೋಕಸಭೆ ಚುನಾವಣೆ ಸುಮೀಪಿಸುತ್ತಿರುವ ನಿಟ್ಟಿನಲ್ಲಿ ಹುಲಸೂರು ತಾಲೂಕಿನ ಅಂಬೇವಾಡಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಸವಕಲ್ಯಾಣದಿಂದ ಮಹಾರಾಷ್ಟ್ರದ ಲಾತೂರ್ಗೆ ತೆರಳುತ್ತಿದ್ದ ಇಚರ್ ಗೂಡ್ಸ್ ವಾಹನದಲ್ಲಿ 5.26 ಲಕ್ಷ ರೂಪಾಯಿ ಮೌಲ್ಯದ ಆರ್ಎಮ್ಡಿ, ವಿಮಲ್ ಪಾನ್ ಮಸಾಲಾ ಮತ್ತು ತಂಬಾಕು ಇದರ ಜೊತೆಗೆ 14.26 ಲಕ್ಷ ನಗದನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ವಾಹನ ಸೇರಿ ಒಟ್ಟು 31 ಲಕ್ಷ 53 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಬಗ್ಗೆ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.