ಬೆಳಗಾವಿ, ಫೆ 22 (DaijiworldNews/HR): ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರಿಗೂ ಟಿಕೆಟ್ ಇಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ಬಾರಿ ಪುತ್ರಿ ಪ್ರಿಯಂಕಾ ಸ್ಪರ್ಧೆ ಮಾಡುವದಿಲ್ಲ. ಸಾಮಾನ್ಯ ಕಾರ್ಯಕರ್ತರಿಗೆ ಚಿಕ್ಕೋಡಿ ಭಾಗದಿಂದ ಟಿಕೆಟ್ ಕೊಡಬೇಕು ಎಂಬ ನಿರ್ಧಾರ ಮಾಡಲಾಗಿದೆ. ಚಿಕ್ಕೋಡಿಯಲ್ಲಿ ಚಿಂಗಳೆ, ಬುಟಾಳೆ, ಗಜಾನನ ಸೇರಿದಂತೆ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಅಲ್ಲದೇ ಕ್ರೀಯಾಶೀಲ ಕಾರ್ಯಕರ್ತರು ಇರುವಾಗ ಈ ಭಾಗದಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದರು.
ಇನ್ನು ಬೆಳಗಾವಿ ಹಾಗೂ ಚಿಕ್ಕೋಡಿ ಭಾಗದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂದು ಈಗಾಗಲೇ ಎರಡು ಕ್ಷೇತ್ರಕ್ಕೆ ತಲಾ ಇಬ್ಬರ ಹೆಸರು ಪೈನಲ್ ಮಾಡಲಾಗಿದ್ದು, ಅಂತಿಮ ತಿರ್ಮಾಣವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.