ಮೈಸೂರು, ಫೆ 22 (DajiworldNews/AK):ಮುಖ್ಯಮಂತ್ರಿ ಸಿದ್ದರಾಮಯ್ಯ ಬಾವಿಯೊಳಗಿನ ಕಪ್ಪೆ. ಪ್ರಧಾನಿ ಮೋದಿ ಸಮುದ್ರದಲ್ಲಿ ಈಜಿದ ಮನುಷ್ಯ.ಅವರಿಗೂ-ಇವರಿಗೂ ಹೋಲಿಕೆ ಎಲ್ಲಿದೆ? ಎಂ ದು ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಟೀಕೆ ಮಾಡಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಬಗ್ಗೆ, ರಾಷ್ಟ್ರ ಪತಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಂತಹ ಸಿದ್ದರಾಮಯ್ಯ ಬಗ್ಗೆ ಏನು ಮಾತನಾಡಲಿ? ಎಂದು ಪ್ರಶ್ನಿಸಿದ ಅವರು , ಗ್ಯಾರಂಟಿಗಳಿಂದ ಗೆದ್ದು ಅದೇ ಗುಂಗಿನಲ್ಲಿ ಇದ್ದಾರೆ. ಮೋದಿ ಸರ್ಕಾರ ಮಾಡಿರುವ ಜನಪರ ಯೋಜನೆಗಳ
ಮುಂದೆ ಇದೆಲ್ಲವೂ ನಡೆಯುತ್ತಾ ಅನ್ನುವುದು ನೋಡೋಣ ಎಂದರು.
ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ದಾರೆ. ಕೇಳುವ ರೀತಿಯಲ್ಲಿ ಕೇಳಿದರೆ ನಮ್ಮ ತೆರಿಗೆ ಬರುತ್ತದೆ. ಯಾವ ಸರ್ಕಾರವೂ ನಮಗೆ ಅನ್ಯಾಯ ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡರು.