ನವದೆಹಲಿ, ಫೆ 20 (DaijiworldNews/AK): ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಬಿಜೆಪಿಗೆ ಸೇರ್ಪಡೆ ಯಾಗಲಿದ್ದರೆ ಎಂಬ ವದಂತಿಗಳಿಗೆ ಇದೀಗ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಮಲ್ ನಾಥ್ ಅವರ ನಿಷ್ಠೆ ಕಾಂಗ್ರೆಸ್ ಜೊತೆಗಿದೆ. ಕಮಲ್ ನಾಥ್ ಅವರು ಕಾಂಗ್ರೆಸ್ ನ ಭಾಗವಾಗಿದ್ದಾರೆ. ಹೀಗಾಗಿ ಅವರು ಯಾವತ್ತೂ ಬೇರೆ ಪಕ್ಷಕ್ಕೆ ಹಾರಲಾರರು. ಅವರು ಇಂದು, ಮುಂದೆ ಹಾಗೂ ಎಂದೆಂದಿಗೂ ಕಾಂಗ್ರೆಸ್ನಲ್ಲೇ ಇರುತ್ತಾರೆ ಎಂದು ಹೇಳಿದರು.
ಕಮಲ್ನಾಥ್ 12 ಕ್ಕೂ ಹೆಚ್ಚು ಶಾಸಕರ ಜೊತೆಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ಅಲ್ಲದೇ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಫೆ.22ಕ್ಕೆ ಮಧ್ಯಪ್ರದೇಶ ಪ್ರವೇಶವಾಗುವ ಸಮಯದಲ್ಲಿ ಈ ವಿಚಾರ ಕೇಳಿಬಂದಿತ್ತು.
ಸದ್ಯಕ್ಕೆ ಕಮಲ್ ನಾಥ್ ಕಡೆಯಿಂದ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಪಕ್ಷವನ್ನು ಬದಲಾಯಿಸುವ ಕುರಿತು ಕಮಲ್ ನಾಥ್ ಅವರನ್ನು ಹೇಳಿದಾಗ ನೀವೆಲ್ಲ ಯಾಕೆ ಉತ್ಸುಕರಾಗಿದ್ದೀರಿ. ಹಂಗೆ ಏನಾದರೂ ಇದ್ದರೆ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.