ಬೆಂಗಳೂರು, ಫೆ 20 (DaijiworldNews/HR): ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಅಗತ್ಯ ಔಷಧಿಗಳ ಕೊರತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನಪರಿಷತ್ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರವು ಉಚಿತವಾಗಿ ಪೂರೈಸುವ ಒಟ್ಟು 410 ಅಗತ್ಯ ಔಷಧಿಗಳ ಪೈಕಿ 190 ಅಗತ್ಯ ಔಷಧಿಗಳ ದಾಸ್ತಾನು ಇಲ್ಲ. ಏಪ್ರಿಲ್ ಒಂದರೊಳಗೆ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸುವ ಸಾಧ್ಯತೆಯಿದೆ ಎಂದರು.
ಇನ್ನು ಸಾರ್ವಜನಿಕ ಪೂರೈಕೆಗಾಗಿ ಸರ್ಕಾರವು ಒಟ್ಟು ಔಷಧಿಗಳಲ್ಲಿ 410 ಅಗತ್ಯ ಔಷಧಿಗಳು ಮತ್ತು 322 ಅಪೇಕ್ಷಣೀಯ ಔಷಧಿಗಳ ಅನ್ನು ಖರೀದಿಸುತ್ತದೆ ಎಂದು ತಿಳಿಸಿದ್ದಾರೆ.