ಬೆಳಗಾವಿ, ಫೆ 18(DaijiworldNews/SK): ನಾನು ಕೂಡ ರಾಮನ ಭಕ್ತಳು. ರಾಮರಾಜ್ಯದ ಪರಿಕಲ್ಪನೆ ಇಟ್ಟುಕೊಂಡು ನಮ್ಮ ಸರ್ಕಾರ ನಡೆಯುತ್ತಿದೆ. ವಿಧಾನಸಭಾ ಚುನಾವಣೆಗೂ ಮುಂಚೆ ನಮ್ಮ ಸರ್ಕಾರ ರಾಜ್ಯದ ಜನತೆಗೆ ೫ ಗ್ಯಾರಂಟಿಗಳನ್ನು ನೀಡುವುದಾಗಿ ತಿಳಿಸಿತ್ತು. ಅದೇ ರೀತಿ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತಿನಂತೆ ತಕ್ಷಣವೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನೂತನ ಬಸ್ ನಿಲ್ದಾಣ ಲೋಕಾರ್ಪನೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕಾಂಗ್ರೆಸ್ ಪಕ್ಷ ಸದಾ ಬಡವರ ಪರಾವಾಗಿದ್ದು, ನುಡಿದಂತೆ ನಡೆಯುವ ಸರ್ಕಾರವಾಗಿದೆ ಎಂದಿದ್ದಾರೆ.
ಇನ್ನು ನಮ್ಮ ಪಕ್ಷದಲ್ಲಿ ರಾಮಲಿಂಗ ರೆಡ್ದಿ ವರ್ಕೋಹಾಲಿಕ್ ಮಂತ್ರಿ ಇದ್ದಹಾಗೆ ಅವರು ಸಾರಿಗೆ ಇಲಾಖೆಯ ಸಚಿವಾಗಿರುವುದು ನಮಗೆ ಖುಷಿಯ ಸಂಗತಿ. ಅವರ ನೇತೃತ್ವದಲ್ಲಿ ಈಗಾಗಲೇ ನಮ್ಮ ಜಿಲ್ಲೆಗೆ 50 ಬಸ್ ಹಂಚಿಕೆ ಮಾಡಲಾಗಿದೆ. ಇನ್ನೂ 1 ಸಾವಿರ ಬಸ್ ಖರೀದಿ, 2 ಸಾವಿರ ಉದ್ಯೋಗ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ ಭರವಸೆ ನೀಡಿದ್ದಾರೆ.