ನವದೆಹಲಿ, ಫೆ 17 (DaijiworldNews/HR): ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇಂದು ಇನ್ಸ್ಯಾಟ್-3ಡಿಎಸ್ ಹವಾಮಾನ ಮುನ್ಸೂಚನಾ ಉಪಗ್ರಹವನ್ನು ಉಡಾವಣೆ ಮಾಡಲಿದೆ ಎಂದು ವರದಿಯಾಗಿದೆ.
ಇಂದು ಸಂಜೆ 5.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹ ಉಡಾವಣೆಗೊಳ್ಳಲಿದ್ದು, 51.7 ಮೀಟರ್ ಎತ್ತರವಿರುವ ಜಿಎಸ್ಎಲ್ವಿ ರಾಕೆಟ್ ಉಪಗ್ರಹವನ್ನು ಹೊತ್ತೂಯ್ಯಲಿದೆ.
ಇನ್ನು ಉಪಗ್ರಹ ಒಟ್ಟು ತೂಕ 2,274 ಕೆ.ಜಿ. ಇದರ ನಿರ್ಮಾಣಕ್ಕೆ 480 ಕೋಟಿ ರೂ. ವೆಚ್ಚವಾಗಿದ್ದು, ಕೇಂದ್ರ ಭೂವಿಜ್ಞಾನ ಇಲಾಖೆ ಸಂಪೂರ್ಣ ವೆಚ್ಚವನ್ನು ಭರಿಸಿದೆ.
ಈ ಉಪಗ್ರಹವು ಭೂಮಿಯ ಮೇಲ್ಪದರ, ಸಮುದ್ರಭಾಗಗಳ ಮೇಲೆ ನಿಗಾ, ಮಳೆ, ಪ್ರವಾಹಗಳು, ಭೂಕಂಪನಗಳ ಕುರಿತು ಉಪಗ್ರಹ ಮುನ್ಸೂಚನೆ ನೀಡಲಿದೆ.