ನವದೆಹಲಿ, ಫೆ 16 (DaijiworldNews/HR): ರಾಮ ದೇವರನ್ನು 'ಕಾಲ್ಪನಿಕ' ಎಂದು ಕರೆಯುತ್ತಿದ್ದ ಕಾಂಗ್ರೆಸ್ ಪಕ್ಷವು ಈಗ 'ಜೈ ಸಿಯಾ ರಾಮ್' ಎಂದು ಜಪಿಸುತ್ತಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಮ ದೇವರನ್ನು 'ಕಾಲ್ಪನಿಕ' ಎಂದು ಕರೆಯುತ್ತಿದ್ದ ಕಾಂಗ್ರೆಸ್ ಪಕ್ಷವು ಈಗ 'ಜೈ ಸಿಯಾ ರಾಮ್' ಎಂದು ಜಪಿಸುತ್ತಿದೆ ಎಂದರು.
ಇನ್ನು 370 ನೇ ವಿಧಿ ಮತ್ತು ಹರಿಯಾಣದ ಸಿಬ್ಬಂದಿಗೆ ಪ್ರಯೋಜನಕಾರಿಯಾದ 'ಒಂದು ಶ್ರೇಣಿ, ಒಂದು ಪಿಂಚಣಿ' ಬಗ್ಗೆಯೂ ಮಾತನಾಡಿದ ಅವರು, ಸ್ವಲ್ಪ ಸಮಯದ ಹಿಂದೆ, ರೇವಾರಿ ಏಮ್ಸ್, ಹೊಸ ರೈಲು ಮಾರ್ಗ ಮತ್ತು ಮೆಟ್ರೋ ಮಾರ್ಗ ಮತ್ತು ವಸ್ತುಸಂಗ್ರಹಾಲಯ ಸೇರಿದಂತೆ ಹರಿಯಾಣಕ್ಕೆ 10,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನ ಹಸ್ತಾಂತರಿಸುವ ಅವಕಾಶ ನನಗೆ ಸಿಕ್ಕಿತು ಎಂದರು.
ಇನ್ನು ಭಗವಂತ ರಾಮನ ಆಶೀರ್ವಾದವು ಹೇಗಿದೆ ಅಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಇಂತಹ ಪವಿತ್ರ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶ ನನಗೆ ಸಿಗುತ್ತದೆ ಎಂದು ಹೇಳಿದ್ದಾರೆ.