ರಾಮನಗರ, ಫೆ 14 (DaijiworldNews/PC): ಕಾಂಗ್ರೆಸ್ ಗಿಫ್ಟ್ ಕಾರ್ಡ್ ಪಾಲಿಟಿಕ್ಸ್ ಗೆ ಕೌಂಟರ್ ಕೊಟ್ಟಿದ್ದ ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ನಾವು ಕೊಟ್ಟಿರೋದು ಪಕ್ಷದ ಚಿಹ್ನೆಯ ಕಾರ್ಡ್ ಹೊರತು ಗಿಫ್ಟ್ ಅಲ್ಲ ಎಂದು ಹೇಳಿದ್ದಾರೆ.
ಮಾಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಕಾರ್ಡ್ಗಳನ್ನು ಕೊಟ್ಟಿರೋದು ಮತ ಹಾಕಲು ಕ್ರಮ ಸಂಖ್ಯೆ ನೋಡಿಕೊಳ್ಳುವುದಕ್ಕೆ. ಮತ ಹಾಕುವ ವೇಳೆ ಪಾಂಪ್ಲೆಟ್ ಇಟ್ಟುಕೊಂಡು ಹೋಗಲು ಆಗುವುದಿಲ್ಲ ಹೀಗಾಗಿ ಕಾರ್ಡ್ ನೀಡಿದ್ದೆವು ಎಂದಿದ್ದಾರೆ.
ನಾನು ಪಕ್ಷ ಬದಲಾವಣೆ ಮಾಡಿದಾಗ ಜನರಿಗೆ ಚಿಹ್ನೆಯ ಗೊಂದಲ ಆಗುತ್ತದೆ, ಅದಕ್ಕಾಗಿ ನಾವು ನಮ್ಮ ಪಕ್ಷದ ಚಿಹ್ನೆಯ ಕಾರ್ಡ್ ಕೊಟ್ಟಿದ್ದೇವೆ. ನಾವು ಗಿಫ್ಟ್ ಕೊಡ್ತೀವಿ ಎಂದು ಎಲ್ಲೂ ಹೇಳಿಲ್ಲ. ಮಾಜಿ ಶಾಸಕ ಮಂಜುನಾಥ್ ಮೊದಲು ಜನರ ಬಳಿ ಪಡೆದಿರೋ ಹಣ ವಾಪಸ್ ಕೊಡಲಿ. ಆ ಮೇಲೆ ಗಿಫ್ಟ್ ಕೊಡಲು ಹೇಳಿ ಎಂದಿದ್ದಾರೆ.