ನವದೆಹಲಿ,ಫೆ 14 (DaijiworldNews/ AK):ಮದ್ಯ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಆರನೇ ಬಾರಿಗೆ ಸಮನ್ಸ್ ಜಾರಿ ಮಾಡಿದ್ದು ಫೆಬ್ರವರಿ 19ರಂದು ಹಾಜರಾಗುವಂತೆ ಇಡಿ ಕೇಜ್ರಿವಾಲ್ಗೆ ಸೂಚಿಸಿದೆ.ಇದಕ್ಕೂ ಮುನ್ನ ಕೇಜ್ರಿವಾಲ್ಗೆ ಇಡಿ 5 ಬಾರಿ ಸಮನ್ಸ್ ಜಾರಿ ಮಾಡಿತ್ತು.ಆದರೆ ಇದುವರೆಗೆ ವಿಚಾರಣೆಗೆ ಇಡಿ ಮುಂದೆ ಹಾಜರಾಗಿಲ್ಲ. ಇಡಿ ಸಮನ್ಸ್ ಕೇಂದ್ರ ಸರ್ಕಾರದ ಕುತಂತ್ರ ಹೇಳಿದ್ದರು.
ಜನವರಿ 31, 17, 3, ಡಿಸೆಂಬರ್ 21 ಮತ್ತು ನವೆಂಬರ್ 2ರಂದು ಇಡಿ ಕೇಜ್ರಿವಾಲ್ಗೆ ಸಮನ್ಸ್ ಕಳುಹಿಸಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಲಿಲ್ಲ. ಇಡಿ ನಿರಂತರವಾಗಿ ಸಮನ್ಸ್ ಜಾರಿ ಮಾಡಿದ ನಂತರ, ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಈ ಎಲ್ಲಾ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿತ್ತು.ವಿಚಾರಣೆಯ ನೆಪದಲ್ಲಿ ಅವರನ್ನು ಕರೆಸಿ ಬಂಧಿಸಲು ಇಡಿ ಬಯಸಿದೆ. ಇಡಿ ವಿಚಾರಣೆ ಮಾಡಲು ಬಯಸಿದರೆ, ಅದು ತನ್ನ ಪ್ರಶ್ನೆಗಳನ್ನು ಬರೆದು ಕೇಜ್ರಿವಾಲ್ಗೆ ನೀಡಬಹುದು ಎಂದು ಎಎಪಿ ಹೇಳಿದೆ.
ಇಡಿಗೆ ಕಳುಹಿಸಿದ ಪತ್ರದಲ್ಲಿ ಕೇಜ್ರಿವಾಲ್ ಅವರು ಪ್ರತಿ ಕಾನೂನು ಸಮನ್ಸ್ ಸ್ವೀಕರಿಸಲು ಸಿದ್ಧ ಎಂದು ಹೇಳಿದ್ದಾರೆ. ಆದರೆ ಇಡಿ ಸಮನ್ಸ್ ಕೂಡ ಹಿಂದಿನ ಸಮನ್ಸ್ಗಳಂತೆ ಕಾನೂನುಬಾಹಿರವಾಗಿದೆ. ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿ ಅದನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಇದಕ್ಕೂ ಮೊದಲು ಕೇಜ್ರಿವಾಲ್ ನನ್ನ ಜೀವನವನ್ನು ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಬದುಕಿದ್ದೇನೆ ಎಂದು ಹೇಳಿದ್ದರು.