ಮಧ್ಯಪ್ರದೇಶ, ಫೆ 13 (DaijiworldNews/SK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಒಂದು ಬಾರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುಂಡರೆ ಪರೀಕ್ಷೆಯಿಂದ ಹಿಂದೆ ಸರಿಯುತ್ತಾರೆ.ಆದರೆ ಇಲ್ಲೋಬ್ಬರು 12 ನೇ ತರಗತಿಯಲ್ಲಿ ಫೇಲ್ ಆದರೂ ತಮ್ಮ ಬಾಲ್ಯದ ಕನಸನ್ನು ನನಸು ಮಾಡಲು ಛಲಬಿಡದೇ ಯುಪಿಎಸ್ ಸಿ ಪರೀಕ್ಷೆ ಬರೆದು IPS ಅಧಿಕಾರಿಯಾದ ಮನೋಜ್ ಕುಮಾರ್ ಶರ್ಮಾ ಅವರ ಯಶೋಗಾಥೆ.
ಮನೋಜ್ ಕುಮಾರ್ ಶರ್ಮಾ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ನಿವಾಸಿ. ಬಡ ಕುಟುಂಬದಲ್ಲಿ ಬೆಳೆದಿರುವ ಅವರು ಚಿಕ್ಕ ವಯಸ್ಸಿನಿಂದಲೇ ಐಎಎಸ್ ಅಧಿಕಾರಿ ಆಗುವ ಕನಸು ಕಂಡವರು. ಆದರೆ ಬಾಲ್ಯದಿಂದಲೂ ಓದಿನಲ್ಲಿ ಚುರುಕಾಗಿರದ ಇವರು 9, 10ನೇ ತರಗತಿಯಲ್ಲಿ ಸಿ ಗ್ರೇಡ್ ಸ್ಟೂಡೆಂಟ್ ಆಗಿದ್ದವರು. ಇಷ್ಟು ಮಾತ್ರವಲ್ಲದೇ ಹನ್ನೆರಡನೇ ತರಗತಿಯಲ್ಲಿ ಹಿಂದಿ ವಿಷಯ ಒಂದನ್ನು ಹೊರತುಪಡಿಸಿ ಮಿಕ್ಕೆಲ್ಲಾ ವಿಷಯಗಳಲ್ಲಿ ಇವರು ಫೇಲ್ ಆಗಿದ್ದರು.
ಬಾಲ್ಯದಿಂದಲೂ ಓದಿನಲ್ಲಿ ವೈಫಲ್ಯಗಳನ್ನು ಎದುರಿಸುತ್ತಿದ್ದ ಮನೋಜ್ ಸೋಲುಗಳು ಇದ್ದರೂ ಸಹ ಅವರ ನಂಬಿಕೆ ಹಾಗೂ ಛಲವನ್ನು ಬಿಡಲಿಲ್ಲ. ಬಡತನದ ಕುಟುಂಬದಿಂದ ಬಂದ ಕಾರಣ ಅವರು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಲ್ರೈಬರಿ ಪೀವನ್ ಆಗಿ ದೆಹಲಿಯಲ್ಲಿ ಕೆಲಸ ಮಾಡಿ ತದನಂತರ ಟೆಂಪೋ ಓಡಿಸುತ್ತಿದ್ದರು. ಹಲವು ಬಾರಿ ರಾತ್ರಿ ಭಿಕ್ಷುಕರ ಮಧ್ಯೆ ರಸ್ತೆಯಲ್ಲೇ ಮಲಗುತ್ತಿದ್ದರಂತೆ.
ಇನ್ನು ಮನೋಜ್ ಕುಮಾರ್ ರವರು 12ನೇ ತರಗತಿಯಲ್ಲಿ ಓದುವಾಗ ಒಂದು ಹುಡುಗಿಯನ್ನು ಪ್ರೀತಿಸಿದ್ದರಂತೆ. ಆದರೆ ಅವರು ಹನ್ನೆರಡನೇ ತರಗತಿಯಲ್ಲಿ ಫೇಲ್ ಆದ ಕಾರಣ ಹುಡುಗಿಯ ಬಳಿ ಪ್ರೀತಿ ವ್ಯಕ್ತಪಡಿಸಲು ಹಿಂದೇಟು ಹಾಕಿದ್ದರು. ಆದರೆ ದೈರ್ಯ ಮಾಡಿ ಕೊನೆಗೂ ಮನೋಜ್ ಅವರು ತಮ್ಮ ಪ್ರೀತಿಯನ್ನು ಶ್ರದ್ಧಾ ಬಳಿ ಹೇಳಿಕೊಂಡರು. ಪ್ರೀತಿಗೆ ಒಪ್ಪಿಗೆ ಸೂಚಿಸಿದ ಶ್ರದ್ದಾ ಅವರು ನಂತರ ಮನೋಜ್ ಅವರ ಕೈ ಹಿಡಿದರು.
ತದನಂತರ ಮನೋಜ್ ಅವರಿಗೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಸಾಥ್ ನೀಡಿದವರು ಅವರ ಪತ್ನಿ ಶ್ರದ್ದಾ.ಅವರು ಹಾಕಿದ ಷರತ್ತಿನ ಮೇಲೆಯೇ ಮನೋಜ್ ಯುಪಿಎಸ್ ಸಿ ಪರೀಕ್ಷೆಗೆ ಬರೆಯಲು ಸಿದ್ದರಾದ ಅವರಿಗೆ ಬಹುಬೇಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. 3 ಪ್ರಯತ್ನಗಳಲ್ಲಿ ವಿಫಲರಾಗಿದ್ದರು.
ಆದರೆ ತಮ್ಮ ಕಠಿಣ ಪರಿಶ್ರಮದಿಂದ ಮತ್ತೆ ಪರೀಕ್ಷೆ ಬರೆದ ಮನೋಜ್ ಅವರು ನಾಲ್ಕನೇ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 121 ಶ್ರೇಣಿಯೊಂದಿಗೆ IPS ಆಗುವಲ್ಲಿ ಯಶಸ್ವಿಯಾದರು. ಈ ಮೂಲಕ ಮನೋಜ್ 2005ರ ಮಹಾರಾಷ್ಟ್ರ ಕೇಡರ್ ಅಧಿಕಾರಿ. ಅವರು ಪ್ರಸ್ತುತ ಮುಂಬೈ ಪೊಲೀಸ್ನ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.