ಮೈಸೂರು,ಫೆ 12 (DaijiworldNews/ AK): ಜೆಡಿಎಸ್ ವಿಶ್ವಾಸ ಕಾಪಾಡಿಕೊಂಡರೆ ಟಾರ್ಗೆಟ್ 28 ಸಾಧ್ಯವಾಗುತ್ತದೆ. ಅದರೆ ಹೋದಲ್ಲಿ, ಬಂದಲ್ಲಿ ಕಾರ್ಯಕರ್ತರ ಸಭೆ, ಮೈತ್ರಿ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಲು ಹೋಗಬೇಡಿ ಎಂದು ಬಿಜೆಪಿ ನಾಯಕರಿಗೆ ಗೃಹ ಸಚಿವ ಅಮಿತ್ ಶಾ ಬಿಜೆಪಿ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.
ಕಳೆದ ವಿಧಾಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅಬ್ಬರದ ಪ್ರಚಾರ ಮಾಡಿದ್ದರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಜನ ಬಹುಮತ ನೀಡಿದರು. ಹೀಗಾಗಿ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಮಿತ್ ಶಾ ಜೆಡಿಎಸ್ ಮೈತ್ರಿಯೊಂದಿಗೆ ಒಕ್ಕಲಿಗರ ಪ್ರಭಾವವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಬುನಾದಿಯನ್ನು ಭದ್ರಪಡಿಸಲು ಮುಂದಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಸೀಟು ಹಂಚಿಕೆ ಹಾಗೂ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕೆಂಬ ಬಗ್ಗೆ ನಾವು ನಿರ್ಧಾರ ಮಾಡುತ್ತೇವೆ. ಆದರೆ ನಿಮಗೆವಹಿಸಿರುವ ಟಾಸ್ಕ್ನ್ನು ಪೂರ್ಣ ಮಾಡಿ. ಮೈತ್ರಿ ಧರ್ಮ ಪಾಲನೆ ಸ್ವಲ್ಪ ಎಡವಟ್ಟಾದರೆ ಕಷ್ಟವಾಗುತ್ತದೆ ಎಂದು ಶಾ ಮೈಸೂರು ಕ್ಲಸ್ಟರ್ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರಗಳಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸುವ ಮೂಲಕ ಅವುಗಳನ್ನು ಬಿಜೆಪಿ ಮತಗಳನ್ನಾಗಿ ಪರಿವರ್ತಿಸಲು ನಿಗಾವಹಿಸಿಬೇಕು ಮುಖಂಡರಿಗೆ ಅಮಿತ್ ಶಾ ಸೂಚನೆ ಎಂದು ನೀಡಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.