ವಾರಣಾಸಿ, ಏ 26 (Daijiworld News/MSP): ದೇವಾಲಯಗಳ ನಾಡು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧಿಸಲಿರುವ ನರೇಂದ್ರ ಮೋದಿ ಮತ್ತೆ ಆಯ್ಕೆ ಬಯಸಿ ಏಪ್ರಿಲ್ 26ರ ಶುಕ್ರವಾರ ಬೆಳಗ್ಗೆ 11.44ಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ಅನ್ನಪೂರ್ಣ ಎಂಬುವರು ಸಹಿ ಹಾಕಿದರು. ಈ ಸಂದರ್ಭ ಸೂಚಕ ಅನ್ನಪೂರ್ಣ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ಪ್ರಧಾನಿ ಅವರಿಗೆ ಧನ್ಯವಾದ ತಿಳಿಸಿದರು.
ವಾರಣಾಸಿಯಲ್ಲಿರುವ ಕಾಲ ಬೈರವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಾರಾಣಾಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಇದಕ್ಕೂ ಮುನ್ನ ನರೇಂದ್ರ ಮೋದಿಯವರನ್ನು ಎನ್ ಡಿಎ ನಾಯಕರು ಭೇಟಿ ಮಾಡಿ ಶುಭ ಹಾರೈಕೆ ಮಾಡಿದರು. ನಾಮಪತ್ರ ಸಲ್ಲಿಸುವ ಹಿಂದಿನ ದಿನ ನರೇಂದ್ರ ಮೋದಿ ವಾರಾಣಸಿ ನಗರದಲ್ಲಿ ಬೃಹತ್ ರೋಡ್ ಷೋ ನಡೆಸಿ ತಮ್ಮ ಬಲ ಪ್ರದರ್ಶಿಸಿದ್ದರು.