ಮೈಸೂರು , ಫೆ 11 (DaijiworldNews/PC): ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ, ರಾಜ್ಯದಲ್ಲಿ ಸರ್ಕಾರವು ಕಾನೂನು ಉಲ್ಲಂಘನೆ ಮಾಡುವ ವ್ಯಕ್ತಿಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಎಸ್ಡಿಪಿಐನ ಅಬ್ದುಲ್ ಮಜೀದ್ ಅವರ ಜ್ಞಾನವ್ಯಾಪಿ ಮಸೀದಿಗಾಗಿ ಬಲಿದಾನಕ್ಕೆ ಸಿದ್ಧ ಎಂಬ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ ಅವರು ಎಸ್ಡಿಪಿಐ ನಾಯಕ ಅಬ್ದುಲ್ ಮಸೀಜ್ ಕೋರ್ಟ್ ವಿರುದ್ಧ ಮಾತಾಡಿದರೂ ಬಂಧನವಾಗಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಕಾನೂನು ಉಲ್ಲಂಘನೆ ಮಾಡುವವರ ಪರವಾಗಿದೆ. ಈ ಮೂಲಕ ಮುಸಲ್ಮಾನರ ಪರವಾಗಿದೆ ಎಂದು ತೋರಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ರಾಜ್ಯ ಸರ್ಕಾರದ ಮೇಲೆ ಗುಡುಗಿದ್ದಾರೆ.
ದೇಶದ್ರೋಹದ ಹೇಳಿಕೆಗಳನ್ನು ನೀಡುವವರಿಗೆ ರಾಜ್ಯ ಸರ್ಕಾರವು ಅಂತಹವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ನಾನು ಪ್ರಾಧಾನಿ ಮೋದಿಯವರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಇಂತಹ ದೇಶ ದ್ರೋಹದ ಹೇಳಿಕೆಗಳನ್ನು ನೀಡುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದರು.