ದಾವಣಗೆರೆ, ಫೆ 09 (DaijiworldNews/HR): ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಎಸ್. ಈಶ್ವರಪ್ಪ ಅವರು ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿ ಇಂತಹ ರಾಷ್ಟ್ರದ್ರೋಹಿಗಳು ದೇಶವನ್ನ ಛಿದ್ರ ಮಾಡ್ತೀವಿ ಅಂತಾ ಹೋರಾಡ್ತರಲ್ಲಾ ಅವರಿಗೆ ಗುಂಡಿಕ್ಕಿ ಕೊಲ್ಲುವಂತ ಕಾನೂನು ತನ್ನಿ ಎಂದು ಭಾಷಣ ಮಾಡಿದ್ದರು.
ಇನ್ನು ಈಶ್ವರಪ್ಪ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ನಗರದ ನಿಜಲಿಂಗಪ್ಪ ಬಡಾವಣೆಯ 2ನೇ ಮುಖ್ಯ ರಸ್ತೆ, 2 ನೇ ಕ್ರಾಸ್ ನಿವಾಸಿ ಹನುಮಂತಪ್ಪ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಪೋಲೀಸರು ಕೆ.ಎಸ್. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆ.ಎಸ್. ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಸ್ವತಃ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಖಚಿತ ಪಡಿಸಿದ್ದಾರೆ.