ನವದೆಹಲಿ, ಫೆ 09 (DaijiworldNews/HR): INDIA ಒಕ್ಕೂಟದ ಮತ್ತೊಂದು ಪ್ರಮುಖ ಪಕ್ಷ ಆರ್ಎಲ್ಡಿಯು ಎನ್ಡಿಎ (NDA) ಒಕ್ಕೂಟ ಸೇರುವ ಸುಳಿವು ನೀಡಿದ್ದು, ಈ ಮೂಲಕ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆಗೆ ಉತ್ತರ ಪ್ರದೇಶದಲ್ಲಿ ಎರಡು ಸ್ಥಾನಗಳ ಒಪ್ಪಂದ ಮಾಡಿಕೊಂಡಿದೆ.
ಜಯಂತ್ ಚೌಧರಿ
ಮೈತ್ರಿ ಮಾತುಕತೆ ಅಂತಿಮವಾಗಿದ್ದು ಲೋಕಸಭಾ ಸ್ಥಾನಗಳಾದ ಬಾಗ್ಪತ್ ಮತ್ತು ಬಿಜ್ನೋರ್ ಅನ್ನು ಬಿಜೆಪಿ ಬಿಟ್ಟುಕೊಟ್ಟಿದ್ದು, ಜೊತೆಗೆ ಒಂದು ರಾಜ್ಯಸಭಾ ಸ್ಥಾನದ ಭರವಸೆಯನ್ನೂ ನೀಡಲಾಗಿದೆ ಎಂದು ಮೂಲಗಳು ತಿಳಿಸಿದೆ.
ಇನ್ನು ಆರ್ಎಲ್ಡಿಯು ಬಿಜೆಪಿಯೊಂದಿಗಿನ ಮೈತ್ರಿಯ ಅಧಿಕೃತ ಘೋಷಣೆ ಇನ್ನೆರಡು ಮೂರು ದಿನಗಳಲ್ಲಿ ಹೊರಬೀಳಲಿದೆ.
ಬಿಜೆಪಿ ಜತೆ ಆರ್ಎಲ್ಡಿ ಮೈತ್ರಿ ಅಂತಿಮಗೊಂಡಿದ್ದು, ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ನಾಯಕ ಜಯಂತ್ ಸಿಂಗ್ ಪಕ್ಷಕ್ಕೆ 2 ಲೋಕಸಭಾ ಸ್ಥಾನಗಳು ಪಕ್ಕಾ ಎನ್ನುವ ಮಾಹಿತಿ ಲಭ್ಯವಾಗಿದೆ.