ಬೆಂಗಳೂರು,ಫೆ 09 (DaijiworldNews/ AK): ಕಾಂಗ್ರೆಸ್ ಸರ್ಕಾರದ ಅವಧಿ ಶೇ 40ರಷ್ಟು ಕಮಿಷನ್ ಮುಂದುವರಿದಿದೆ ಎಂಬ ಕರ್ನಾ ಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾಡಿರುವ ಆರೋಪವನ್ನು ಉಲ್ಲೇ ಖಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ .ವಿಜಯೇಂ ದ್ರ ಕಾಂಗ್ರೆಸ್ ಸರ್ಕಾರದ ವಿರುದ್ದ
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ' ಎಂಬ ಗಾದೆಮಾತು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಷರಶಃ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಕಾಲದಲ್ಲಿ ಇದೇ ಕೆಂಪಣ್ಣನವರು ಕಮಿಷನ್ ಆರೋಪದ ಗದ್ದಲ ಎಬ್ಬಿಸಿದ್ದರು. ಕಾಂಗ್ರೆಸ್ಸಿಗರು ಅದನ್ನು ಬಂಡವಾಳ ಮಾಡಿಕೊಂಡು ಸತ್ಯಹರಿಶ್ಚಂದ್ರರಂತೆ ಕೂಗಾಡಿದ್ದರು. ಆದರೆ ಈಗ ಸಾಕ್ಷಿ ಸಮೇತ ಶೇ 40 ಕಮಿಷನ್ ಆರೋಪ ಮಾಡುತ್ತಿದ್ದಾರೆ. ವಾಸ್ತವವಾಗಿ ಶೇ 80ರವರೆಗೂ ಕಮಿಷನ್ ದಂಧೆ ಈ ಕಾಂಗ್ರೆಸ್ ಸರ್ಕಾರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ ಸತ್ಯ ಏನೆಂಬುದು ಜನರಿಗೆ ಮನವರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಕೆಂಪಣ್ಣನವರು ತಾವೇ ಹೇಳಿರುವಂತೆ ಕಮಿಷನ್ ವಸೂಲಿಗೆ ನಿಯುಕ್ತಿಯಾಗಿರುವ ಅಧಿಕಾರಗಳ ವಿವರವನ್ನು ಧೈರ್ಯವಾಗಿ ಬಹಿರಂಗಪಡಿಸಲಿ.ಆಗ ಅದರ ಹಿಂದಿರುವ ಮುಖ್ಯ, ಉಪ ಮುಖ್ಯ ಸೂತ್ರಧಾರಿಗಳ ನೈಜ ಮುಖವಾಡ ಕಳಚುತ್ತದೆ ಎಂದು ಸವಾಲು ಹಾಕಿದ್ದಾರೆ.