ವಾರಾಣಸಿ,ಫೆ 09 (DaijiworldNews/AK): ರಷ್ಯಾ-ಉಕ್ರೇನ್ ಯದ್ಧದಿಂದ ನೊಂದು , ಶಾಂತಿ ಬೇಕಿದೆ ಎಂದು ರಷ್ಯಾ ಮೂಲದ ಮಹಿಳೆ ವಾರಾಣಸಿಗೆ ಬಂದು ಕಾಶಿಯಲ್ಲಿ ತಾಂತ್ರಿಕ ದೀಕ್ಷೆ ಪಡೆದುಕೊಂಡಿದ್ದಾರೆ.
ಮಾಸ್ಕೋ ನಿವಾಸಿ ಇಂಗಾ ಬರದೋಷ್ ಎನ್ನುವ ಮಹಿಳೆ ಕಾಶಿಯಲ್ಲಿ ಮಾತಾ ಸಿದ್ಧಿದಾತ್ರಿಯ ತಾಂತ್ರಿಕ ದೀಕ್ಷೆ ಪಡೆದರು. ಬಳಿಕ ಕಶ್ಯಪ ಗೋತ್ರ ಸ್ವೀಕರಿಸಿ, ಹೆಸರನ್ನು ಇಂಗಾನಂದ ಮಾಯಿಮಾ ಎಂದು ಬದಲಾಯಿಸಿಕೊಂಡಿದ್ದಾರೆ.
ದೀಕ್ಷೆಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಅವರು, ಮನಸ್ಸು ಈಗ ಶಾಂತವಾಗಿದೆ. ರಷ್ಯಾ-ಉಕ್ರೇನ್ ನಡುವಿನ ಯುದ್ದದಿಂದ ನಾನು ನೊಂದಿದ್ದೇನೆ. ಶಾಂತಿಗಾಗಿ ಮಾತಾ ಸಿದ್ಧಿದಾತ್ರಿಯನ್ನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಶಿವಾಳದಲ್ಲಿರುವ ವಾಗ್ಯೋ ಗ ಚೇತನ ಪೀಠದಲ್ಲಿ ಪಂಡಿತ ಆಶಾಪತಿ ಶಾಸ್ತ್ರಿ ಅವರು ಇಂಗಾ ಬರದೋ ಷ್ ಅವರಿಗೆ ಮಾತಾ ಸಿದ್ಧಿದಾತ್ರಿಯ ತಾಂತ್ರಿಕ ದೀಕ್ಷೆ
ನೀಡಿದರು.