ದಾವಣಗೆರೆ, ಫೆ 08 (DaijiworldNews/HR): ಕೇಂದ್ರದಿಂದ ಬರ ಪರಿಹಾರ ಬಂದಿಲ್ಲ ಎಂದು ಹೇಳಿ, ದೆಹಲಿಗೆ ಹೋಗಿ ಕರ್ನಾಟಕದ ಮಾನ ಕಳೆಯುವ ಕೆಲಸ ಕಾಂಗ್ರೆಸ್ನವರು ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸರ್ಕಾರಿ ದುಡ್ಡಲ್ಲಿ ಜಾಹೀರಾತು ನೀಡಿ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದೆ. ಕೇಂದ್ರದಿಂದ ಬರ ಪರಿಹಾರ ಬಂದಿಲ್ಲ ಎಂದು ಹೇಳಿ, ದಿಲ್ಲಿಗೆ ಹೋಗಿ ರಾಜ್ಯದ ಮಾನ ಕಳೆಯುವ ಕೆಲಸ ಕಾಂಗ್ರೆಸ್ ನವರು ಮಾಡಿದ್ದಾರೆ ಎಂದರು.
ಇನ್ನು ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ 6 ಸಾವಿರ ಕೋಟಿ ಕೊಟ್ಟಿದೆ. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಲೊಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ದೇಶ ವಿಭಜನೆ ಮಾಡುವವರನ್ನು ಕೆಲವೇ ದಿನಗಳಲ್ಲಿ ಜನರು ಅಪ್ರಸ್ತುತ ಮಾಡಲಿದ್ದಾರೆ. ರಾಜ್ಯದಲ್ಲಿ ಎಲ್ಲಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಪಣ ತೊಟ್ಟಿದ್ದೇವೆ. ಅದಕ್ಕೆ ಜನರ ಸಹಕಾರ ಬೇಕು ಎಂದಿದ್ದಾರೆ.