ಪಣಜಿ,ಫೆ 06 (DaijiworldNews/ AK): ಗೋಬಿ ಮಂಚೂರಿ ಅಂದ್ರೆ ಅದೇಷ್ಟು ಜನರ ಬಾಯಿಯಲ್ಲಿ ನೀರುಣಿಸುತ್ತದೆ. ಗೋಬಿಯನ್ನ ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಆದರೆ ಉತ್ತರ ಗೋವಾದ ಮಾಪುಸಾ ನಗರದಲ್ಲಿ ಹೆಚ್ಚೆಚ್ಚು ತಿಂದರೆ ಅಪಾಯ ಎದುರಾಗಲಿದೆ ಎಂದು ಫಾಸ್ಟ್ಫುಡ್ ಗೋಬಿ ಮಂಚೂರಿಯನ್ ಮಾರಾಟಕ್ಕೆ ನಿಷೇಧ ಹೇರಿ ಸ್ಥಳೀಯ ನಗರ ಪಾಲಿಕೆ ಆದೇಶ ಹೊರಡಿಸಿದೆ.
ನಗರದ ಹೋಟೆಲ್, ಅಂಗಡಿ, ತಳ್ಳುಗಾಡಿಗಳಲ್ಲಿ ಎಲ್ಲಿ ಕೂಡ ಗೋಬಿ ಮಂಚೂರಿಯನ್ ಮಾರಾಟ ಮಾಡಬಾರದು ಎಂದು ಆದೇಶ ಹೊರಡಿಸಲಾಗಿದೆ. ನಗರದಲ್ಲಿ ಪ್ರಸಿದ್ಧ ಬೋಗಡೇಶ್ವರ್ ಜಾತ್ರಾ ಮಹೋತ್ಸವ ಇರುವುದರಿಂದ ನಗರ ಪಾಲಿಕೆಯ ಕೆಲ ಸದಸ್ಯರು ಗೋಬಿ ಮಂಚೂರಿಯನ್ ಮಾರಾಟ ಮಾಡುವುದನ್ನು ನಿಷೇಧಿಸಬೇಕು ಎಂದು ಮನವಿ ಬಂದ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.
ಗೋಬಿ ತಯಾರಿಕೆಯಲ್ಲಿ ಬಳಸುವ ರುಚಿಕಾರಕ, ರಸಾಯನಿಕ , ಕೃತಕ ಬಣ್ಣ, ಕಡಿಮೆ ಬೆಲೆಯ ಸಾಸ್ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುವ ಪರಿಣಾಮ ಹಾಗೂ ಶುಚಿತ್ವ, ನೈರ್ಮಲ್ಯದ ಬಗ್ಗೆ ಹಲವು ದೂರುಗಳು ಬಂದ ಆಧಾರದ ಮೇಲೆ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.