ತುಮಕೂರು, ಫೆ 5(DaijiworldNews/AK):ನಮ್ಮ ಜಾಗೃತಿಯಲ್ಲಿ ನಾವು ಇರಬೇಕು. ಸ್ಥಳೀಯ ಮಟ್ಟದಲ್ಲಿ ಪರಿಪೂರ್ಣವಾಗಿ ಮೈತ್ರಿ ಆಗುವುದು ಕಷ್ಟ . ಹಾಗಾಗಿ ನಮ್ಮ ಜಾಗೃತಿಯಲ್ಲಿ ನಾವು ಇರಬೇಕು ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ನಾನು ವಿಶ್ಲೇಷಣೆ ಮಾಡಿದ್ದೇನೆ. 4 ಲಕ್ಷ ಮತ ಹೆಚ್ಚಿದೆ ಎಂದು ಜೆಡಿಎಸ್ನವರು ಅಭ್ಯರ್ಥಿ ಹಾಕಿದ್ದರು. ಫಲಿತಾಂಶ ಬಂದಾಗ ಲೆಕ್ಕಾಚಾರ ಉಲ್ಟಾ ಆಗಿತ್ತು. ಹೀಗಾಗಿ ಮೈತ್ರಿಯಾದರೆ ಸಾಮೂಹಿಕವಾಗಿ ಎಲ್ಲಾ ಮತ ಬರುತ್ತೆಂಬುದು ಸುಳ್ಳು.ನಮ್ಮ ಶಕ್ತಿಯನ್ನ ನಾವು ಹೆಚ್ಚಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಮಿತ್ರ ಪಕ್ಷ ಜೆಡಿಎಸ್ನ ನಂಬಬೇಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ನಮ್ಮ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರತಿ ಪಂಚಾಯ್ತಿಯಲ್ಲಿಯೂ ಎರಡೆರಡು ಗುಂಪು ಇದೆ. ಹಾಗಾಗಿ ನಾವು ತುಂಬಾ ಜಾಗೃತೆಯಿಂದ ಚುನಾವಣೆ ಮಾಡಬೇಕು. ಹಾಗಂತ ಮೈತ್ರಿ ಬೇಡ ಅಂತಾ ನಾನು ಹೇಳುತ್ತಿಲ್ಲ.
ತುಮಕೂರು ಲೋಕಸಭೆಗೆ ನಾನು ಕೂಡ ಟಿಕೆಟ್ ಆಕಾಂಕ್ಷಿ.ಈ ಕುರಿತು ವರಿಷ್ಟರಿಗೂ ತಿಳಿಸಿದ್ದೇನೆ. ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.