ರಾಂಚಿ, ಫೆ 05 (DaijiworldNews/HR): ನನ್ನ ಬಂಧಿಸುವಲ್ಲಿ ರಾಜಭವನವೂ ಭಾಗಿಯಾಗಿದೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ, ಮಾಜಿ ಸಿಎಂ ಹೇಮಂತ್ ಸೊರೇನ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಝಾರ್ಖಂಡ್ ರಾಜ್ಯದ ಬಹುಮತದ ಪರೀಕ್ಷೆಗೆ ಮುನ್ನ ವಿಧಾನಸಭೆಯಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡಿದ ಅವರು, ಇಂದು ನಾನು ಕಣ್ಣೀರು ಹಾಕುವುದಿಲ್ಲ, ಏಕೆಂದರೆ ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಕಣ್ಣೀರಿಗೆ ಬೆಲೆಯಿಲ್ಲ ಎಂದರು.
ಇನ್ನು ಮನಿ ಲಾಂಡರಿಂಗ್ ಆರೋಪಗಳನ್ನು ಎದುರಿಸುತ್ತಿರುವ ಹೇಮಂತ್ ಸೋರೆನ್ ಅವರು ಜನವರಿ 31 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಳಿಕ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು.
ಬಂಧನದಲ್ಲಿದ್ದರೂ ಇಂದು ಬಹುಮತ ಪರೀಕ್ಷೆಗಾಗಿ ಇಂದು ವಿಧಾನಸಭೆಗೆ ಬಂದ ಹೇಮಂತ್ ಸೊರೇನ್, ಜನವರಿ 31 ರ ರಾತ್ರಿಯನ್ನು ದೇಶದ ಪ್ರಜಾಪ್ರಭುತ್ವದಲ್ಲಿ “ಕರಾಳ ಅಧ್ಯಾಯ” ಎಂದಿದ್ದಾರೆ.