ಬೆಂಗಳೂರು, ಫೆ 05 (DaijiworldNews/PC): ಈ ಬಾರಿ SSLC ವಿಧ್ಯಾರ್ಥಿಗಳಿಗೆ 50:30:20 ಸೂತ್ರದ ಮೂಲಕ ಪಬ್ಲಿಕ್ ಪರೀಕ್ಷೆಗಳು ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತೀರ್ಮಾನಿಸಿದೆ.
ಶೇ. 50ರಷ್ಟು ಸುಲಭ, ಶೇ. 30ರಷ್ಟು ಸಾಧಾರಣ ಮತ್ತು ಶೇ. 20ರಷ್ಟು ಕಠಿನ ಅಥವಾ ಅನ್ವಯಿಕ ಪ್ರಶ್ನೆಗಳು 2023-24ರ ಸಾಲಿನ ಎಸೆಸೆಲ್ಸಿ ಪ್ರಶ್ನೆಪತ್ರಿಕೆಗಳಲ್ಲಿ ಇರಲಿವೆ.
ಭಾಷೆಗಳು, ಮುಖ್ಯ ವಿಷಯ ಎಲ್ಲಾ ಪರೀಕ್ಷೆಗಳಲ್ಲಿಯೂ ಇದೇ ಮಾದರಿಯನ್ನು ಅನುಸರಿಸಲು ಮಂಡಳಿ ತೀರ್ಮಾನಿಸಿದೆ.
ಈ ವರ್ಷದ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳ ಅವಕಾಶವಿದ್ದು, ಈ ಮೂರು ಪರೀಕ್ಷೆಗಳಲ್ಲಿಯೂ ಇದೇ ಮಾದರಿ ಅನುಸರಣೆಯಾಗಲಿದೆ.
ಎಲ್ಲ ವಿದ್ಯಾರ್ಥಿಗಳನ್ನು ಗಮನಲ್ಲಿಟ್ಟುಕೊಂಡೇ ನಾವು ಪ್ರಶ್ನೆಪತ್ರಿಕೆಯನ್ನು ತಯಾರಿಸುತ್ತೇವೆ. ಒಬ್ಬ ಸಾಧಾರಣ ವಿದ್ಯಾರ್ಥಿಯೂ ಉತ್ತೀರ್ಣಗೊಳ್ಳಲು ಸಾಧ್ಯವಾಗಬೇಕು ಎಂಬುದು ನಮ್ಮ ಆಶಯ ಆದ್ದರಿಂದ ಈ ಎಲ್ಲಾ ಅಂಶಗಳನ್ನೂ ಗಮನಿಸಿಕೊಂಡೇ ಪ್ರಶ್ನೆಪತ್ರಿಕೆಯ ಮಾದರಿ ಸಿದ್ಧಪಡಿಸಲಾಗುತ್ತದೆ ಎಂದು ಕೆಎಸ್ಇಎಬಿ ನಿರ್ದೇಶಕರಾದ ಎಚ್. ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.