ಗುವಾಹಟಿ, ಫೆ 4 (DaijiworldNews/SK): ಅಸ್ಸಾಂಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಫೆ. ೪ರಂದು 11,600 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಇದರೊಂದಿಗೆ ಕಾಮಾಖ್ಯ ದೇವಸ್ಥಾನದ ಕಾರಿಡಾರ್, ಗುವಾಹಟಿಯ ಹೊಸ ವಿಮಾನ ನಿಲ್ದಾಣದಿಂದ ಆರು ಪಥದ ರಸ್ತೆ, ನೆಹರು ಸ್ಟೇಡಿಯಂ ಅನ್ನು ಫಿಫಾ ಗುಣಮಟ್ಟಕ್ಕೆ ಏರಿಸುವ ಯೋಜನೆ ಮತ್ತು ಚಂದ್ರಾಪುರದಲ್ಲಿ ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣ ಯೋಜನೆ ಸೇರಿ ಇನ್ನೂ ಹಲವು ಯೋಜನೆಗಳಿಗೆ ಚಾಲನೆ ನೀಡಿದರು.
ಇನ್ನು ಮೂಲಗಳ ಪ್ರಕಾರ, ಫೆ ೩ ರಂದು ಅಸ್ಸಾಂಗೆ ಆಗಮಿಸಿದ ಪ್ರಧಾನಿ ಮೋದಿ ಅವರು ರಾತ್ರಿ ವೇಳೆ ನಗರದ ಕೊಯಿನಾಧಾರ ರಾಜ್ಯ ಅತಿಥಿ ಗೃಹದಲ್ಲಿ ತಂಗಿದ್ದರು. ಬಳಿಕ ರಾತ್ರಿ ಬಿಜೆಪಿಯ ರಾಜ್ಯ ಕೋರ್ ಕಮಿಟಿಯ ಪದಾಧಿಕಾರಿಗಳನ್ನು ಭೇಟಿ ಮಾಡಿ ಪಕ್ಷದ ವ್ಯವಹಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.