ತುಮಕೂರು, 02 (DaijiworldNews/PC): ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಪೀಳಿಗೆಯ ಬಗ್ಗೆ ಆಲೋಚನೆ ಮಾಡುತ್ತಾರೆ ಆದ್ದರಿಂದ ಯಾವುದೇ ಉಚಿತ ಕೊಡುಗೆಯನ್ನು ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಶಕ್ತಿ ವಂದನಾ ಅಭಿಯಾನದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರವು ಬಿಜೆಪಿ ಅಂದರೆ ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸುತ್ತಿದೆ. ಆದರೂ ತ್ರಿವಳಿ ತಲಾಖ್ ತೊಡೆದು ಹಾಕಿ ಆ ಸಮುದಾಯದ ಮಹಿಳೆಗೆ ಗೌರವ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಪ್ರಧಾನಿ ಮೋದಿ ಮುಂದಿನ ಪೀಳಿಗೆ ಬಗ್ಗೆ ಆಲೋಚನೆ ಮಾಡುತ್ತಾರೆ. ಹಾಗಾಗಿ ಯಾವುದೇ ಉಚಿತ ಕೊಡುಗೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಇಂದಿರಾ ಗಾಂಧಿ ದಿಟ್ಟ ಮಹಿಳೆ. 17 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದರೂ, ಸ್ತ್ರೀ ಶೋಷಣೆ ತಡೆಯಲು ಸಾಧ್ಯ ಆಗಲಿಲ್ಲ. ಇದು ಕಟು ಸತ್ಯ. ಪ್ರಧಾನಿ ಮೋದಿ ಎಲ್ಲಾ ಸ್ತ್ರೀಯರಿಗೂ ಸಮಾನ ಅವಕಾಶ ಸಿಗಬೇಕು ಎಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2047 ನೇ ಇಸವಿಗೆ ಭಾರತ ವಿಕಸಿತ ಭಾರತ ಆಗಬೇಕು ಎಂಬ ಕನಸನ್ನು ಕಂಡಿದ್ದಾರೆ. 2047 ರ ವೇಳೆ ಸಂಪೂರ್ಣ ಭಾರತ ಅಭಿವೃದ್ಧಿ ಆಗಲು ಮಹಿಳೆಯರ ಪಾತ್ರ ಮುಖ್ಯ. ಆದ್ದರಿಂದ ಮೋದಿ ಮಹಿಳೆಯರ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.