ನವದೆಹಲಿ, ಫೆ 02 (DaijiworldNews/ AK): ದೇಶ ವಿಭಜನೆ ಹೇಳಿಕೆ ವಿಚಾರ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರುದ್ಧ ಸಂವಿಧಾನಾತ್ಮಕ ಕ್ರಮ ಕೈಗೊಳ್ಳಬೇಕು , ಕಾಂಗ್ರೆಸ್ ಪಕ್ಷ ದೇಶದ ಕ್ಷಮೆ ಕೇಳಬೇಕು ಎಂದು ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ ಜೋಶಿ ಅವರು, ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ದೇಶ ವಿಭಜನೆ ಹೇಳಿಕೆ ನೀಡುವ ಮೂಲಕ ಭಾರತೀಯ ಸಂವಿಧಾನಕ್ಕೆ, ಡಾ.ಅಂಬೇಡ್ಕರ್ಗೆ ಅಪಮಾನ ಎಸಗಿದ್ದಾರೆ. ಹಾಗಾಗಿ ಇವರ ವಿರುದ್ಧ ಕಾನೂನಾತ್ಮಕ ಕ್ರಮವಾಗಲೇಬೇಕು ಎಂದು ಹೇಳಿದರು..
ತಮ್ಮ ಪಕ್ಷದ ಸದಸ್ಯ, ಸಂಸದನ ದೇಶ ಒಡೆಯುವ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದೇಶದ ಕ್ಷಮೆ ಯಾಚಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ. ದೇಶವನ್ನು ವಿಭಜಿಸುವ ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ದೇಶ ಒಡೆಯುವ ನೀತಿ ಕಾಂಗ್ರೆಸ್ನ ಪರಂಪರೆಯಾಗಿಬಿಟ್ಟಿದೆ. ಈಗ ಅದೇ ಪಕ್ಷದ ಸಂಸದ, ಅದೂ ಒಬ್ಬ ಉಪ ಮುಖ್ಯಮಂತ್ರಿ ಸಹೋದರನ ದೇಶ ವಿಭಜನೆ ಹೇಳಿಕೆ ಸಂಬಂಧ ತನಿಖೆಗೆ ಎಥಿಕ್ಸ್ ಕಮಿಟಿ ರಚನೆಯಗಬೇಕು ಎಂದು ಜೋಶಿ ಸದನವನ್ನು ಒತ್ತಾಯಿಸಿದರು.