ಬೆಂಗಳೂರು , ಫೆ 01 (DaijiworldNews/PC): ಡಿಜಿಟಲ್ ಪೇ ಆಗಿರುವ ಪೇಟಿಎಂ ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಮಾಡಿರುವುದರಿಂದ ಇನ್ನು ಪೇಟಿಎಂ ಹೊಸ ಡೆಪಾಸಿಟ್ ಅನ್ನು ಪಡೆಯುವಂತಿಲ್ಲ ಎಂದು ಆರ್ ಬಿ ಐ ನೋಟೀಸ್ ಒಂದನ್ನು ನೀಡಿದೆ.
ಪೇಟಿಎಂ ವಿವಿಧ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಖಾತೆ ರಚಿಸಲು ಮತ್ತು ಡೆಪಾಸಿಟ್ ಪಡೆಯುವಂತಿಲ್ಲ ಎಂದು ಆರ್ ಬಿ ಐ ಸೂಚನೆಯನ್ನು ನೀಡಿದೆ.
ಫೆ. 29ರ ನಂತರ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ವ್ಯಾಲಟ್, ಫಾಸ್ಟ್ಟ್ಯಾಗ್ ಇತ್ಯಾದಿ ಪ್ರೀಪೇಯ್ಡ್ ಯಂತ್ರಗಳಿಗೆ ಟಾಪ್ಅಪ್ ಹಾಕಿಸುವಂತಿಲ್ಲ ಎಂದು ಆರ್ ಬಿ ಐ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.