ಚೆನ್ನೈ,ಏ24(Daijiworld News/AZM):ಟಿಕ್ ಟಾಕ್ ಬಳಕೆದಾರರಿಗೆ ಇದೊಂದು ಖುಷಿಯ ಸುದ್ದಿ. ಮದ್ರಾಸ್ ಹೈಕೋರ್ಟ್ ಟಿಕ್ ಟಾಕ್ ಆಪ್ಲಿಕೇಷನ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಇಂದು ಹಿಂಪಡೆದಿದ್ದು, ಶೀಘ್ರವೇ ಟಿಕ್ ಟಾಕ್ ಆಪ್ ಗ್ರಾಹಕರಿಗೆ ಲಭ್ಯವಾಗಲಿದೆ.
ಮದ್ರಾಸ್ ಹೈಕೋರ್ಟಿನ ಮಧುರೈ ಪೀಠವು ಟಿಕ್ ಟಾಕ್ ವಿಡಿಯೋ ಆಪ್ ಮೇಲಿನ ನಿಷೇಧ ಹಿಂಪಡೆದಿದೆ. ಟಿಕ್ ಟಾಕ್ ಆಪ್ ಬಳಸಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಲಾಗುತ್ತಿದ್ದು, ಅಶ್ಲೀಲ, ಅಸಭ್ಯ ವಿಡಿಯೋಗಳು ಹೆಚ್ಚಾಗಿವೆ. ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಿಷೇಧ ಹೇರುವಂತೆ ಕೋರಲಾಗಿತ್ತು. ಸುಪ್ರೀಂಕೋರ್ಟ್ ಆದೇಶದಂತೆ ಗೂಗಲ್ ಪ್ಲೇಸ್ಟೋರ್ ಹಾಗೂ ಆಪಲ್ ಸ್ಟೋರ್ ನಿಂದ ಟಿಕ್ ಟಾಕ್ ಅಪ್ಲಿಕೇಷನ್ ತೆಗೆದು ಹಾಕಲಾಗಿತ್ತು. ನಿಷೇಧ ತೆರವು ಬಳಿಕ ಶೀಘ್ರವೇ ಟಿಕ್ ಟಾಕ್ ಅಪ್ ಗ್ರಾಹಕರಿಗೆ ಲಭ್ಯವಾಗಲಿದೆ.
ಟಿಕ್ ಟಕ್ ಆಪ್ ಪರಿಚಯಿಸಿರುವ ಚೀನಾ ಮೂಲದ ಬೈಟ್ ಡ್ಯಾನ್ಸ್ ಸಂಸ್ಥೆ ಪರ ಹಿರಿಯ ವಕೀಲ ಅಭಿಶೇಕ್ ಮನು ಸಿಂಘ್ವಿ ವಾದಿಸಿದರು. ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಿಷೇಧ ಹೇರುವಂತೆ ಕೋರಲಾಗಿತ್ತು. ಟಿಕ್ ಟಕ್ ಆಪ್ ಪರಿಚಯಿಸಿರುವ ಚೀನಾ ಮೂಲದ ಬೈಟ್ ಡ್ಯಾನ್ಸ್ ಸಂಸ್ಥೆ ಪರ ಹಿರಿಯ ವಕೀಲ ಅಭಿಶೇಕ್ ಮನು ಸಿಂಘ್ವಿ ವಾದಿಸಿದರು. ಕೋಟ್ಯಂತರ ಜನ ಈ ಅಪ್ಲಿಕೇಷನ್ ಬಳಸುತ್ತಿದ್ದಾರೆ. ಈಗ ನಿಷೇಧ ಹೇರಿರುವುದರಿಂದ ನಮ್ಮ ಕಕ್ಷಿದಾರರಿಗೆ ದಿನಕ್ಕೆ 3 ಕೋಟಿ ರು ನಷ್ಟವಾಗುತ್ತಿದೆ ಎಂದಿದ್ದರು.