ರಾಜಸ್ಥಾನ,ಜ 31 (DaijiworldNews/RA):ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರಕಾರಿ ಹುದ್ದೆಗಳನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ.
ಆದ್ರೆ ಕೆಲವೊಬ್ಬರು ಮಾತ್ರ ಆ ಎಲ್ಲ ಸರಕಾರಿ ಹುದ್ದೆಗಳನ್ನು ನಿರಾಯಾಸವಾಗಿ ಪಡೆದುಕೊಳ್ಳುತ್ತಾರೆ.ಸದ್ಯ ನಾವು ಹೇಳ್ತಾ ಇರುವುದು ಕೇವಲ 22ನೇ ವಯಸ್ಸಿನಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಐಎಎಸ್ ಅಧಿಕಾರಿಯಾದ ಒಬ್ಬ ಮಹಿಳಾ ಸಾಧಕಿಯೊಬ್ಬರ ಕಥೆ.ಅಂದ ಹಾಗೆ ಅವರು ಹೆಸರು ಸ್ವಾತಿ ಮೀನಾ.
ಸ್ವಾತಿಯವರು 8ನೇ ತರಗತಿಯಲ್ಲಿದ್ದಾಗ ಆಕೆಯ ತಾಯಿಯ ಸೋದರ ಸಂಬಂಧಿ ಸರಕಾರಿ ಅಧಿಕಾರಿಯಾದರು. ಸ್ವಾತಿಯ ತಂದೆ ಆ ಅಧಿಕಾರಿಯನ್ನು ಭೇಟಿಯಾದಾಗ ಅವರ ತಂದೆಗೆ ತುಂಬಾನೇ ಸಂತೋಷವಾಗಿತ್ತು.
ದೇಶದ ಅತಿ ಕಿರಿಯ ವಯಸ್ಸಿನಲ್ಲಿಯೇ ಐಎಎಸ್ ಆಫೀಸರ್ ಸ್ವಾತಿ ಮೀನಾ ತಂದೆಯ ಮುಖದಲ್ಲಿನ ಆ ಸಂತೋಷವನ್ನು ಗಮನಿಸಿ ಆ ಸರಕಾರಿ ಅಧಿಕಾರಿಯ ಬಳಿಯೇ ಯುಪಿಎಸ್ ಸಿ ಪರೀಕ್ಷೆಯ ಬಗ್ಗೆ ಕೇಳಿ ತಿಳಿದುಕೊಳ್ತಾರೆ.ಆಗಲೇ ಅವರು ತಾನು ಐಎಎಸ್ ಅಧಿಕಾರಿಯಾಗಬೇಕೆಂದು ದಿಟ್ಟ ನಿರ್ಧಾರವನ್ನು ಮಾಡುತ್ತಾರೆ.ತಂದೆಯ ಈ ಖುಷಿ ಅವರು ಐಎಎಸ್ ಆಫೀಸರ್ ಆಗಬೇಕು ಅನ್ನುವ ಆಸೆ ಚಿಗುರೊಡೆಯುವಂತೆ ಮಾಡಿತ್ತು.
ಹಾಗಾಗಿ ಅವರು ಹಗಲು ರಾತ್ರಿಯಲ್ಲದೆ ತುಂಬಾ ಕಷ್ಟಪಟ್ಟು ಓದಿ ಮುಂದೆ ಬರುತ್ತಾರೆ.10ನೇ ಕ್ಲಾಸು ಹಾಗೂ ಪಿಯುಸಿಯಲ್ಲಿ ಕೂಡ ಅವರು ತುಂಬಾನೇ ಓದುವುದರಲ್ಲಿ ಮುಂದೆ ಇರುತ್ತಾರೆ. ಕೇವಲ 22ನೇ ವಯಸ್ಸಿನಲ್ಲಿ ಯುಪಿಎಸ್ ಸಿ ತೇರ್ಗಡೆಯಾಗಿ ಐಎಎಸ್ ಆದ ಸ್ವಾತಿ ಮೀನಾ ತಮ್ಮ ಬ್ಯಾಚ್ ನ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಯಾಗಿದ್ದರು.
ಸ್ವಾತಿಯವರು ರಾಜಸ್ಥಾನದಲ್ಲಿ ಜನಿಸಿ, ಅಶ್ಮೀರ್ ನಲ್ಲಿ ಶಿಕ್ಷಣ ಪಡೆದರು.ಆಗ ಅವರ ತಾಯಿ ಯಾವಾಗಲೂ ತನ್ನ ಮಗಳು ವೈದ್ಯೆ ಆಗಬೇಕೆಂದು ಬಯಸುತ್ತಿದ್ದರು. ಸ್ವಾತಿ ಅಧಿಕಾರಿಯಾಗಲು ನಿರ್ಧರಿಸಿದಾಗ, ಆಕೆಯ ತಂದೆ ಬೆಂಬಲಿಸಿದರು. ಸ್ವಾತಿಗೆ ನಿರಂತರವಾಗಿ ಸಹಾಯ ಮಾಡುತ್ತಿದ್ದರು.ಈ ತಯಾರಿಯ ಅವಧಿಯಲ್ಲಿ ಸ್ವಾತಿಯ ತಾಯಿ ಪೆಟ್ರೋಲ್ ಪಂಪ್ ನಡೆಸುತ್ತಿದ್ದರು.
ತಾಯಿಯ ಬ್ಯುಸಿ ಇದ್ದ ಕಾರಣ, ಸ್ವಾತಿಯ ಉತ್ತಮ ತಯಾರಿಗಾಗಿ ತಂದೆ ಅನೇಕ ಡೆಮೊ ಸಂದರ್ಶನಗಳನ್ನು ತೆಗೆದುಕೊಂಡರು.ಸ್ವಾತಿಯನ್ನು ಮಧ್ಯಪ್ರದೇಶದ ಮಂಡ್ಲಾದಲ್ಲಿ ನೇಮಿಸಿದಾಗ ಅಲ್ಲಿ ಗಣಿ ಮಾಫಿಯಾದ ಪ್ರಾಬಲ್ಯವಿತ್ತು. ಜಿಲ್ಲಾಧಿಕಾರಿಯಾಗಿ ಅಲ್ಲಿಗೆ ಬಂದ ಆಕೆಗೆ ವಿವಿಧ ಇಲಾಖೆಗಳಿಂದ ಗಣಿ ಮಾಫಿಯಾದ ವಿರುದ್ಧ ಹಲವು ದೂರುಗಳು ಬಂದಿದ್ದವು.
ಈ ಎಲ್ಲ ದೂರುಗಳ ಆಧಾರದ ಮೇಲೆ ಕ್ರಮ ಕೈಗೊಂಡಿದ್ದಾರೆ. ಮೀನಾ ಅಲ್ಲಿಗೆ ಬಂದ ಕೂಡಲೇ ಈ ಮೈನಿಂಗ್ ಮಾಫಿಯಾ ವಿರುದ್ಧ ಹೋರಾಟ ನಡೆಸಿದರು.
ಮಧ್ಯಪ್ರದೇಶದ ಖಾಂಡ್ವಾದಲ್ಲಿ ಸ್ವಾತಿ ಅವರ ಅಧಿಕಾರಾವಧಿಯೂ ತುಂಬಾ ಸವಾಲಿನದ್ದಾಗಿತ್ತು. ಆದರೆ ಸ್ವಾತಿ ಮೀನಾ ಆಡಳಿತದ ಜೊತೆಗೆ ಈ ಸವಾಲಿನ ಕೆಲಸವನ್ನು ಸುಲಭವಾಗಿ ನಿಭಾಯಿಸಿದರು.
ಇವರ ಈ ಸಾಧನೆಯೇ ನಮ್ಮ ಯುವಜನರಿಗೆ ಪ್ರೇರಣೆಯಾಗಲಿ. ಅವರು ಕೂಡ ಯುಪಿಎಸ್ ಸಿ ಪರೀಕ್ಷೆ ಬರೆದು ಅದರಲ್ಲಿ ಪಾಸಾಗಿ ಈ ದೇಶದ ಜನರ ಸೇವೆ ಮಾಡುವಂತಾಗಲಿ ಅನ್ನುವುದೇ ನಮ್ಮ ಆಶಯ.