ನವದೆಹಲಿ, ಜ 30(DaijiworldNews/AA): ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಪಾಕಿಸ್ತಾನದ 19 ಸಿಬ್ಬಂದಿ, ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಹಾಗೂ ಎಫ್ ವಿಅಲ್ ನಯೀಮಿ ಹಡಗನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ ಎಸ್ ಸುಮಿತ್ರಾ ಸೋಮವಾರದಂದು ಸೋಮಾಲಿಯಾದ ಪೂರ್ವ ಕರಾವಳಿ ಮತ್ತು ಏಡನ್ ಕೊಲ್ಲಿಯಲ್ಲಿ ರಕ್ಷಿಸಿದೆ.
ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗೆಂದು 17 ಸಿಬ್ಬಂದಿಯೊಂದಿಗೆ ಯುದ್ಧನೌಕೆ ಐಎನ್ಎಸ್ ಸುಮಿತ್ರಾವನ್ನು ನಿಯೋಜಿಸಲಾಗಿದೆ. ಸೋಮಾಲಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾದ ಪಾಕಿಸ್ತಾನದ ಹಡಗನ್ನು ರಕ್ಷಿಸುವ 36 ಗಂಟೆಗಳ ಮುಂಚೆ ಇದೇ ಯುದ್ಧನೌಕೆ ಮೀನುಗಾರಿಕಾ ಹಡಗು ಎಫ್ ವಿ ಇಮಾನ್ ರಕ್ಷಿಸಿತ್ತು.
ಐಎನ್ಎಸ್ ಸುಮಿತ್ರಾವು ಭಾರತೀಯ ನೌಕಾಪಡೆಯ ಸ್ಥಳೀಯ ಕಡಲಾಚೆಯ ಗಸ್ತು ನೌಕೆಯಾಗಿದ್ದು, ಇದನ್ನು ಸೋಮಾಲಿಯಾ ಮತ್ತು ಏಡನ್ ಕೊಲ್ಲಿಯ ಪೂರ್ವದಲ್ಲಿ ಕಡಲ್ಗಳ್ಳತನ ಹಾಗೂ ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗಿದೆ.
ಇಮಾನ್ ಹಡಗನ್ನು ಕಡಲ್ಗಳ್ಳರು ಅಪಹರಿಸಿದ್ದ ಬಗ್ಗೆ ಕರೆ ಬಂದ ಕೂಡಲೇ ಭಾರತೀಯ ಯುದ್ಧನೌಕೆ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನದ 19 ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ ಎಂದು ತಿಳಿಸಿದೆ.