ಬೀದರ್, ಜ 29 (DaijiworldNews/SK): ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ರಾಜ್ಯಾಧ್ಯಕ್ಷ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಔರಾದ್ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ರಾಜ್ಯಾಧ್ಯಕ್ಷರ ಕಾಲಿಗೆ ಬಿದಿದ್ದಾರೆ.
ಬೀದರ್ ನಲ್ಲಿ ಶಾಸಕರ ನಡುವೆಯೇ ಮುಸುಕಿನ ಗುದ್ದಟಾ ಸುರುವಾಗಿದೆ. ಈ ಹಿನ್ನಲೆಯಲ್ಲಿ ಶಾಸಕ ಚೌಹಾಣ್ ಅವರು ಪರೋಕ್ಷವಾಗಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ದ ಅಸಮದಾನ ಹೊರಹಾಕಿದ್ದು, 2024 ರಲ್ಲಿ ಒಳ್ಳೆಯ ಅಭ್ಯರ್ಥಿ ತನ್ನಿ ಎಂದು ಮನವಿ ಮಾಡಿದ್ದಾರೆ.
ಇನ್ನು ಭಾಷಣದ ವೇಳೆ ಮಾತನಾಡಿದ ಚೌಹಾಣ್ ಅವರು 10 ವರ್ಷಗಳಿಂದ ನನಗೆ ಅನ್ಯಾಯವಾಗಿದೆ, ಬೀದರ್ಗೆ ಒಳ್ಳೆಯ ಅಭ್ಯರ್ಥಿ ನೀಡಿ. ಕಾರ್ಯಕರ್ತರನ್ನು ಜೈಲಿಗೆ ಕಳಿಸೋರು ಅಧಿಕಾರದಲ್ಲಿರುವುದು ಬೇಡಾ, ಕಾರ್ಯಕರ್ತರಿಂದಲೇ ನಾವು ಇರುವುದು ಎಂದರು.