ನವದೆಹಲಿ, ಜ 29 (DaijiworldNews/SK): ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದ ಚಟುವಟಿಕೆಗಳಲ್ಲಿ ತೊಡಗಿಸಿರುವ ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ಸಂಘಟನೆಯನ್ನ ಯುಎಪಿಎ ಅಡಿಯಲ್ಲಿ ಐದು ವರ್ಷಗಳ ಕಾಲ 'ಕಾನೂನುಬಾಹಿರ ಸಂಘಟನೆ' ಎಂದು ಸೋಮವಾರ ನರೇಂದ್ರ ಮೋದಿ ಸರ್ಕಾರ ಘೋಷಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡ ಗೃಹ ಸಚಿವಾಲಯದ ಕಚೇರಿ, "ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ ದೃಷ್ಟಿಕೋನವನ್ನು ಬಲಪಡಿಸಲು 'ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾವನ್ನು ಯುಎಪಿಎ ಅಡಿಯಲ್ಲಿ ಇನ್ನೂ ಐದು ವರ್ಷಗಳ ಅವಧಿಗೆ 'ಕಾನೂನುಬಾಹಿರ ಸಂಘಟನೆ' ಎಂದು ತಿಳಿಸಿದೆ.
ಇನ್ನು SIMI ಸಂಘಟನೆಯು ಭಾರತದ ಸಾರ್ವಭೌಮತ್ವ, ಭದ್ರತೆ ಮತ್ತು ಸಮಗ್ರತೆಗೆ ಅಡ್ಡಿಪಡಿಸುವುದು ಜೊತೆಗೆ ಭಯೋತ್ಪಾದನೆಯನ್ನು ಪ್ರಚೋದಿಸುವಲ್ಲಿ, ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವಲ್ಲಿ ಈ ಸಂಘಟನೆ ತೊಡಗಿಸಿಕೊಂಡಿರುವುದು ಕಂಡುಬಂದಿದೆ.
2014 ರಲ್ಲಿ ಭೋಪಾಲ್ ಜೈಲ್ ಬ್ರೇಕ್, 2014 ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ, 2017 ರಲ್ಲಿ ಗಯಾ ಸ್ಫೋಟಗಳು ಸೇರಿದಂತೆ ದೇಶದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ ಸದಸ್ಯರು ಭಾಗಿಯಾಗಿದ್ದರು ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.