ಭುವನೇಶ್ವರ, ಜ 29 (DaijiworldNews/SK): 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಮತ್ತೆ ಪ್ರಧಾನಿಯಾದರೆ ಭಾರತ ದೇಶದಲ್ಲಿ ಸರ್ವಾಧಿಕಾರ ಜಾರಿಯಾಗಲಿದೆ. ಬಳಿಕ ಭಾರತದಲ್ಲಿ ಚುನಾವಣೆಯೇ ನಡೆಯುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಭುವನೇಶ್ವರದಲ್ಲಿ ಒಡಿಶಾ ಬಚಾವೋ ಸಮಾವೇಶ ರ್ಯಾಲಿಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, ದೇಶದಲ್ಲಿ ಪ್ರಜಾಪ್ರಭುತ್ವನ್ನು ಉಳಿಸಲು 2024ರ ಲೋಕಸಭೆ ಚುನಾವಣೆಯು ಜನರಿಗೆ ಇರುವ ಕೊನೆಯ ಅವಕಾಶ. ಇಲ್ಲವಾದಲ್ಲಿ ದೇಶದಲ್ಲಿ ಸರ್ವಾಧಿಕಾರ ಬರಲಿದೆ ಎಂದರು.
ಬಿಜೆಪಿ ಮತ್ತು ಅದರ ಸಿದ್ಧಾಂತವಾದಿಯಾಗಿರುವುದು ಆರ್ ಎಸ್ ಎಸ್. ಈ ಕಾರಣ ಜನರು ದೂರವಿರುವುದು ಉತ್ತಮ. ಇದು ವಿಷದಂತೆ ಅಪಾಯಕಾರಿ ಎಂದು ವ್ಯಂಗ್ಯವಾಡಿದ್ದಾರೆ.