ನವದೆಹಲಿ, ಜ 29 (DaijiworldNews/MS): "ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ "ರಾಜಕೀಯ ಪ್ರವಾಸೋದ್ಯಮ" ವಾಗಿದ್ದು , ಇತರ ಎಲ್ಲಾ ಪಕ್ಷಗಳು 2024 ರ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವಾಗ ತಮ್ಮ ಪಕ್ಷವು ಇನ್ನೂ "ಟ್ರಾವೆಲ್ " ಮಾಡುತ್ತಿದೆ" ಎಂದು ಸ್ವಪಕ್ಷದ ವಿರುದ್ದ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಕಿಡಿಕಾರಿದ್ದಾರೆ.
“ಕಾಂಗ್ರೆಸ್ ಪಕ್ಷವು ಕೆಲವು ಶ್ರೇಷ್ಠ ಮತ್ತು ಬುದ್ಧಿವಂತ ನಾಯಕರನ್ನು ಹೊಂದಿದೆ. ಆದರೆ ಎಲ್ಲಾ ರಾಜಕೀಯ ಪಕ್ಷಗಳು ಒಂದೆಡೆ2024ರ ಚುನಾವಣೆಗೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಇಡೀ ಕಾಂಗ್ರೆಸ್ ಪಕ್ಷ ರಾಜಕೀಯ ಪ್ರವಾಸೋದ್ಯಮ ಮಾಡುತ್ತಿದೆ; ಅವರು ಪ್ರಯಾಣಿಸುವುದರಲ್ಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ, 2024 ಆರಂಭದಲ್ಲೇ ನಾವು 2024 ರ ಚುನಾವಣೆಗಳನ್ನು ಗೆಲ್ಲುವುದು ಹೇಗೆ ಎಂದು ನಾವು ಲೆಕ್ಕಾಚಾರ ಮಾಡುತ್ತೇವೆ. ಆದರೆ ಕಾಂಗ್ರೆಸ್ ನ ಪ್ರಸ್ತುತ ಬೆಳವಣಿಗೆ 2029 ರ ಚುನಾವಣೆಗೆ ಸಿದ್ಧವಾಗುವಂತೆ ಕಂಡುಬರುತ್ತಿದೆ. ನಾವು 2024 ರ ಚುನಾವಣೆಯನ್ನೇ ಮುಂದಿಟ್ಟುಕೊಂಡು ತಯಾರಿ ನಡೆಸಿದ್ದರೆ, ಇಂದಿನ ಬೆಳವಣಿಗೆಗಳು ನಡುಯುತ್ತಿರಲಿಲ್ಲ, ”ಎಂದು ಅವರು ಹೇಳಿದ್ದಾರೆ.