ಬೆಂಗಳೂರು, ಜ 29 (DaijiworldNews/AK): ಮಂಡ್ಯದ ಧ್ವಜ ವಿಚಾರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.ಈ ಕುರಿತಂತೆ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಇಂದು ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು, ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.
ನಿನ್ನೆ ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯತ್ ಆಡಳಿತಮಂಡಳಿಯವರು ಹಾರಿಸಲಾಗಿದ್ದ ಹನುಮ ಧ್ವಜವನ್ನು ಕೆಳಗಿಸಿದರು.ಮಂಡ್ಯ ದ ಕೆರಗೋಡು ಗ್ರಾಮದಲ್ಲಿ ಈ ವಿಚಾರವಾಗಿ ಭಾರೀ ಖಂಡನೆ ವ್ಯ ಕ್ತವಾಯಿತು. ಇದನ್ನುಖಂಡಿಸಿದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ರಾಜಧಾನಿಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯ ದ ಕೆರಗೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ಹಾಕಲಾಗಿದ್ದ 108 ಅಡಿ ಎತ್ತ ರದ ಹನುಮ ಧ್ವ ಜವನ್ನುಕೆಳಗಿಳಿಸಿ, ರಾಷ್ಟ್ರ ಧ್ವಜ ಹಾರಿಸಿದ ತಾಲೂಕು ಅಧಿಕಾರಿಗಳ ನಡೆ ಸದ್ಯ ಭಾರೀ ಸಂಘರ್ಷ ಕ್ಕೆ ಕಾರಣವಾಗಿದೆ.
ಇದೀಗ ಮಂಡ್ಯದಲ್ಲಿ ಪೊಲೀಸರು ಬಿಗಿ ಬಂದೋ ಬಸ್ತ್ ಮಾಡಿದ್ದಾರೆ. ಜಿಲ್ಲೆಯಲ್ಲಿ ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡ ಹಿನ್ನೆಲೆ ಕೆರಗೋಡಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.