ಬಿಹಾರ, ಜ 28 (DaijiworldNews/RA): ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಜೀವನದಲ್ಲಿ ಏನನ್ನೂ ಬೇಕಾದರು ಸಾಧಿಸಬಹುದು. ಆಗ ದಾರಿ ಎಷ್ಟೇ ಕಷ್ಟವಾದರೂ ಸರಿ ಗುರಿ ಮುಟ್ಟಲು ಸಾಧ್ಯ ಎಂಬುವುದನ್ನು ಇಲ್ಲೊಬ್ಬರು ಸಾಧಕರು ತೋರಿಸಿಕೊಟ್ಟಿದ್ದಾರೆ.
ಅಂದ ಹಾಗೆ ಅವರು ಹೆಸರು ಶೇಖರ್ ಕುಮಾರ್ IRS ಶೇಖರ್ ಕುಮಾರ್ ಅವರು ತಾನೂ ಯಾವತ್ತೂ ಸಿವಿಲ್ ಸರ್ವೀಸಸ್ ಪರೀಕ್ಷೆ ಬರೆಯಬೇಕು ಎಂದು ಬಯಸಿದವರಲ್ಲ.ಇತ್ತ ಅವರ ತಂದೆ ತಾಯಿ ಕೂಡ ಹೆಚ್ಚೇನು ಓದಿದವರಲ್ಲ.ಆದರೆ ಹೆತ್ತವರು ದೇಶದ ಅತ್ಯಂತ ಕಷ್ಟಕರವಾದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತಮ್ಮ ಮಗ ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸಿದ್ದರು.
ಶೇಖರ್ ಕುಮಾರ್ ಯುಪಿಎಸ್ ಸಿ ಪರೀಕ್ಷೆಗೆ ಅತ್ಯಂತ ಸಮರ್ಪಣಾ ಭಾವದಿಂದ ತಯಾರಿ ನಡೆಸಿದ್ದರು. ಆದರೆ ಈ ಪ್ರಯಾಣದಲ್ಲಿ ಹಲವು ಅಡೆತಡೆಗಳು ಎದುರಾದವು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು.
ನಂತರ ಕೆಲವು ನಿಮಿಷಗಳ ವಿಳಂಬದಿಂದಾಗಿ ಅವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದು ಅವರ ಮುಖ್ಯ ಪರೀಕ್ಷೆಯಾಗಿತ್ತು. ನಂತರ 2019 ರಲ್ಲಿ, ಮೂರನೇ ಪ್ರಯತ್ನದಲ್ಲಿ ಅವರು ಯಶಸ್ವಿಯಾದರು. ಆ ಮೂಲಕ IRS ಅಧಿಕಾರಿಯಾದರು.