ಬೆಂಗಳೂರು,ಜ 28 (DaijiworldNews/RA):ಕಾರ್ಯಕ್ರಮವೊಂದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚಕ್ರವರ್ತಿ ಸೂಲಿಬೆಲೆಯವರು ಅಯೋಗ್ಯ ಎಂಬ ಪದವನ್ನು ಬಳಸಿದ್ದಕ್ಕೆ ಸೂಲಿಬೆಲೆಯವರ ವಿರುದ್ಧ ರಾಯಚೂರು ಪೊಲೀಸರು ಅಟ್ರಾಸಿಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಳೆದ ನಾಲ್ಕು ದಿನಗಳ ಹಿಂದೆ ರಾಯಚೂರಿನ ಪೊಲೀಸರು ಸೂಲಿಬೆಲೆ ಅವರಿಗೆ ನೋಟಿಸ್ ನೀಡಲೆಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಮನೆಗೆ ಬಂದಿದ್ದರು.ಆದರೆ ಅವರು ಆ ಸಮಯದಲ್ಲಿ ರಾಮಮಂದಿರ ಉದ್ಘಾನೆಯ ಹಿನ್ನಲೆ ಅಯೋಧ್ಯೆಗೆ ತೆರಳಿದ್ದರು.ಚಕ್ರವರ್ತಿಯವರು ಅಯೋಧ್ಯೆಯಲ್ಲಿ ಇದ್ದಿದ್ದರಿಂದ ಅವರ ಮನೆಗೆ ನೋಟಿಸ್ ನೀಡಿ ಪೊಲೀಸರು ರಾಯಚೂರಿಗೆ ವಾಪಸ್ ಆಗಿದ್ದರು.
ಇದೀಗ ಅವರ ವಿರುದ್ಧ ರಾಯಚೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.