ನವದೆಹಲಿ, ಜ 28 (DaijiworldNews/AK): ರಾಜ್ಯದಲ್ಲಿ ಜಾತಿಗಣತಿ ನಡೆಸಲು ಮುಂದಾಗಿರುವ ತೆಲಂಗಾಣ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಕಾಂ ಗ್ರೆಸ್ ನಾಯಕ ರಾಹುಲ್ ಗಾಂಧಿ ನ್ಯಾಯದ ಕಡೆಗೆ ಮೊದಲ ಹೆಜ್ಜೆ ಇಟ್ಟಿದ್ದಕ್ಕಾಗಿ ಅಭಿನಂದನೆಗಳು ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ‘ಜಾತಿಗಣತಿ ಎನ್ನುವುದು ನ್ಯಾಯದ ಕಡೆ ಇಡುವ ಮೊದಲ ಹೆಜ್ಜೆ. ಒಂದು ಸಮಾಜದ
ಆರ್ಥಿ ಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ತಿಳಿಯದೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದು ಕಷ್ಟ.
ದೇಶದ ಏಳಿಗೆಯಲ್ಲಿ ಪ್ರತಿಯೊಂದು ವರ್ಗ ದಪಾತ್ರವನ್ನು ತಿಳಿದುಕೊಳ್ಳಬೇಕಾದರೆ ಜಾತಿ ಗಣತಿಯೊಂದೇ ದಾರಿ. ಜಾತಿಗಣತಿ ನಡೆಸಲು ಮುಂದಾಗಿರುವ ಮುಖ್ಯಮಂ ತ್ರಿ ರೇವಂತ್ ರೆಡ್ಡಿ ಸರ್ಕಾರಕ್ಕೆ ಅಭಿನಂದನೆಗಳು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಜಾತಿಗಣತಿ ನಡೆಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ರೇ ವಂತ್ ರೆಡ್ಡಿ
ಶನಿವಾರ ಘೋಷಿಸಿದ್ದಾರೆ.