ಪಟ್ನಾ,ಜ 27 (DaijiworldNews/AK): ಹಿಂದಿನ ಮೈತ್ರಿಕೂಟವನ್ನು ತೊರೆದು ಹೊಸ ಮೈತ್ರಿ ಮೂಲಕ ಸರ್ಕಾರ ರಚಿಸುವುದಾಗಿ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿತೀಶ್ ಕುಮಾರ್ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಾನು ಮುಖ್ಯಮಂ ತ್ರಿ ಸ್ಥಾನಕ್ಕೆ ರಾಜೀ ನಾಮೆ ನೀಡಿದ್ದೇನೆ. ಅಲ್ಲದೇ ರಾಜ್ಯದಲ್ಲಿ ಸರ್ಕಾರವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೂ ತಿಳಿಸಿದ್ದೇನೆ ಎಂದು ಹೇಳಿದರು.
ಮಹಾಘಟಬಂಧನ್ ಮತ್ತು ಇಂಡಿಯಾ ಬಣದಲ್ಲಿ ಎಲ್ಲವೂ ಸರಿಯಿಲ್ಲದ ಕಾರಣ ಈ ಪರಿಸ್ಥಿತಿ ಬಂದಿದೆ. ಎಲ್ಲರಿಂದಲೂ ಅಭಿಪ್ರಾಯಗಳನ್ನು ಪಡೆದಿದ್ದೇನೆ. ಆ ಬಳಿಕ ರಾಜ್ಯಪಾಲರನ್ನು ಭೇಟಿಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಹಿಂದಿನ ಮೈತ್ರಿಕೂಟದಲ್ಲಿ ಕೆಲಸಮಾಡಲು ನನಗೆ ಬಹಳ ಕಷ್ಟವಾಗುತ್ತಿತ್ತು. ಪಕ್ಷದ ಸದಸ್ಯರಿಗೆ ಈ ಬಗ್ಗೆ ವಿವರಿಸಿದಾಗ, ರಾಜೀನಾಮೆ ನೀಡುವಂತೆ ಸಲಹೆ ನೀಡಿದರು. ಹಾಗಾಗಿ ರಾಜೀನಾಮೆ ನೀಡಿದೆ ಎಂದಿದ್ದಾರೆ.
ಇಂಡಿಯಾ ಮೈತ್ರಿಕೂಟ ಸೇ ರಿಕೊಂಡಿದ್ದೆ. ಆದರೆ, ಅಲ್ಲಿ ಯಾವ ಕೆಲಸವೂ ಆಗುತ್ತಿರಲಿಲ್ಲ. ಇಂಡಿಯಾ ಬಣ ತೊರೆದಿದ್ದೇನೆ’ ಎಂ ದು ಹೇಳಿದ್ದಾರೆ