ಚಾಮರಾಜನಗರ, ಜ 27 (DaijiworldNews/ AK): ಶಾಮನೂರು ಶಿವಶಂಕರಪ್ಪ ಅವರು ಹಿರಿಯ ಮುತ್ಸದ್ದಿಯಲ್ಲ, ಜಾತಿವಾದಿ. ಕಾಂಗ್ರೆಸ್ ಜೀವಂತವಾಗಿದ್ದರೆ ಸಸ್ಪೆಂಡ್ ಮಾಡಲಿ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಶಾಸಕರಾಗಿ, ಮಗ ಮಂತ್ರಿಯಾಗಿ, ನೀನು ಕಾಂಗ್ರೆಸ್ನಲ್ಲಿದ್ದುಕೊಂಡು ಅಧಿಕಾರ ಅನುಭವಿಸಿ ಬೇರೆ ಪಾರ್ಟಿಗೆ ಕ್ಯಾನ್ವಾಸ್ ಮಾಡ್ತಿಯಲ್ಲ ಏನ್ ಹೇಳ್ಬೇಕು ನಿನಗೆ. ನೀನು ದೇಶವಾದಿನೋ? ಇಲ್ಲ, ಜಾತಿವಾದಿನೊ? ಅವರನ್ನ ಪಕ್ಷದಿಂದ ಈ ಕೂಡಲೇ ಹೊರಹಾಕಬೇಕು ಎಂದು ಆಗ್ರಹಿಸಿದರು.
ಅವರೆಲ್ಲ ನೆಂಟರು, ಅವರಿಗೆ ಪಾರ್ಟಿ ಸೋತರು ನೆಂಟಸ್ಥಿಕೆ ಸೋಲಬಾರದು ಎಂದು ಹರಿಹಾಯ್ದಿದ್ದಾರೆ.ಶಾಮನೂರು ಶಿವಶಂಕರಪ್ಪನವರು, ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ, ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಮತ್ತೊಮ್ಮೆ ಸಂಸದರಾಗಬೇಕು ಎಂದಿದ್ದರು.
ಇದಕ್ಕೆ ಕಾಂಗ್ರೆಸ್ನಲ್ಲಿ ಅಸಮಾಧಾನ ಹೊರಬಿದ್ದಿದ್ದೆ. ಇನ್ನೂ ಬಿಜೆಪಿ ನಾಯಕರು ರಾಘವೇಂದ್ರ ಅವರ ಕೆಲಸವನ್ನು ಶಾಮನೂರು ಗುರುತಿಸಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.