ಬಿಹಾರ, ಜ 27 (DaijiworldNews/AK):ಬಿಹಾರದಲ್ಲಿ ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದೆ. ನಿತೀಶ್ ಕುಮಾರ್ ನಾಳೆ ಬೆಳಗ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನಿತೀಶ್ ಕುಮಾರ್ ಇಂದೇ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಎಲ್ಲಾ ಜೆಡಿಯು ಶಾಸಕರು ಬೆಂಬಲ ಪತ್ರ ನೀಡದ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಭಾನುವಾರ ಬೆಳಗ್ಗೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ದಿಢೀರ್ ಬೆಳವಣಿಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚನೆಗೆ ನಿತೀಶ್ ಕುಮಾರ್ ಮುಂದಾಗಿರುವುದರಿಂದ ಭಾನುವಾರವೂ ಸೆಕ್ರೆಟರಿಯೇಟ್ನಂತಹ ಸರ್ಕಾರಿ ಕಚೇರಿಗಳನ್ನು ತೆರೆದಿರಲು ತಿಳಿಸಲಾಗಿದೆ.
ಮೂರು ವರ್ಷಗಳ ಹಿಂದೆ ಎನ್ ಡಿಎ ಮೈತ್ರಿ ತೂರೆದಿದ್ದ ನಿತೀಶ್ ಕುಮಾರ್ ಅಧಿಕೃತ ಘೋಷಣೆ ನೀಡುವವರೆಗೂ ಬಿಜೆಪಿ ನಾಯಕರು ಯಾವುದೇ ಮಾಹಿತಿ ನೀಡದಂತೆ ಹೈಕಮಾಂಡ್ ನಿಂದ ಸೂಚನೆ ಬಂದಿದೆ ಎಂದು ಮೂಲಗಳು ಹೇಳಿವೆ.