ನವದೆಹಲಿ, ಏ 23 (Daijiworld News/MSP): "ಇಂದು ಕೂಡಾ ಪ್ರೀತಿಯಿಂದ ನನ್ನ ತಾಯಿಯೇ ನನಗೆ ಹಣವನ್ನು ನೀಡುತ್ತಾರೆ, ಇದಕ್ಕೆ ಪ್ರತಿಯಾಗಿ ತಾಯಿ ನನ್ನಿಂದ ಏನನ್ನು ನಿರೀಕ್ಷಿಸುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ ಈ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಕ್ಷಯ್ ಕುಮಾರ್ ಅವರು ಪ್ರಧಾನಿ ಮೋದಿ ಅವರನ್ನು ಸಂದರ್ಶನ ಮಾಡಿದ್ದು, ಈ ಸಂದರ್ಭ, "ನಿಮಗೆ ದೊರೆಯುವ ವೇತನದಲ್ಲಿ ನಿಮ್ಮ ತಾಯಿ ಖರ್ಚಿಗಾಗಿ ಎಷ್ಟು ಹಣವನ್ನು ಕಳುಹಿಸುತ್ತೀರಾ ? " ಎಂಬ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ನನ್ನೂರಿಗೆ ಮಾತಾಜೀ ಅವರ ಭೇಟಿಗಾಗಿ ತೆರಳಿದಾಗ ಇಂದು ಕೂಡಾ ನನ್ನಮ್ಮ ನನಗಾಗಿ ಪ್ರೀತಿಯಿಂದ 'ಸವ್ವಾ ರೂಪಾಯಿ' ನನಗಾಗಿ ನೀಡುತ್ತಾರೆ. ಬದಲಾಗಿ ಆಕೆ ನನ್ನಿಂದ ಯಾವುದೇ ರೀತಿಯ ಅಪೇಕ್ಷೆಯನ್ನು ಇಟ್ಟುಕೊಂಡಿಲ್ಲ. ಮಾತ್ರವಲ್ಲದೇ ನನ್ನ ಕುಟುಂಬವು, ಸರ್ಕಾರ ವೈದ್ಯಕೀಯ ನೆರವು ಅಥವಾ ಬೇರೆ ಯಾವುದೇ ನೆರವನ್ನು ಪಡೆದುಕೊಂಡಿಲ್ಲ.
" ಹಾಗೆಂದು ನನ್ನ ಕುಟುಂಬದ ಮೇಲೆ ಪ್ರೀತಿ ಇಲ್ಲ ಎಂದಲ್ಲ. ನನ್ನ ಜೀವನೇ ಈ ರೀತಿ ರೂಪಿತವಾಗಿತ್ತು. ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ದೇಶವನ್ನೇ ನನ್ನ ಪರಿವಾರ ಅಂದುಕೊಂಡಿದ್ದೇನೆ" ಎಂದು ಉತ್ತರಿಸಿದರು.