ನವದೆಹಲಿ, ಜ 27 (DaijiworldNews/MS): ಕೇಂದ್ರ ಸರ್ಕಾರವು ಫೆ.1ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದು,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 6ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ.
ವಿತ್ತ ಸಚಿವೆ ತಮ್ಮ ಆರನೇ ಬಜೆಟ್ ಮಂಡಿಸುವಾಗ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ 5 ಪೂರ್ಣ ಪ್ರಮಾಣದ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿದ್ದು, ಇದೀಗ ಸೀತಾರಾಮನ್ ಕೂಡ ಆರು ಬಾರಿ ಬಜೆಟ್ ಮಂಡಿಸಿದ ಅರ್ಥ ಸಚಿವರೆಂಬ ಹೆಗ್ಗಳಿಕೆ ಪಡೆಯಲಿದ್ದಾರೆ. ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ. ಚಿದಂಬರಂ, ಯಶವಂತ್ ಸಿನ್ಹಾ ಮುಂತಾದವರು ಸತತ ಐದು ಬಜೆಟ್ಗಳನ್ನು ಮಂಡಿಸಿದ್ದಾರೆ.
ಸೀತಾರಾಮನ್, ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಮಂತ್ರಿ, ಜುಲೈ 2019 ರಿಂದ ಐದು ಪೂರ್ಣ ಬಜೆಟ್ಗಳನ್ನು ಮಂಡಿಸಿದ್ದಾರೆ ಮತ್ತು ಮುಂದಿನ ವಾರ ಮಧ್ಯಂತರ ಅಥವಾ ವೋಟ್-ಆನ್-ಅಕೌಂಟ್ ಬಜೆಟ್ ಅನ್ನು ಮಂಡಿಸಲಿದ್ದಾರೆ.