ಕೊಹಿಮಾ, ಜ 26 (DaijiworldNews/AA): ಕಾನೂನು ಬಾಹಿರವಾಗಿ ನಡೆಸಲಾಗುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅವಘಡ ಸಂಭವಿಸಿ 6 ಮಂದಿ ಸಜೀವವಾಗಿ ದಹನಗೊಂಡು 4 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಾಗಾಲ್ಯಾಂಡ್ ನ ವೊಖಾ ಜಿಲ್ಲೆಯ ಭಂಡಾರಿ ಉಪ ವಿಭಾಗದ ರಿಚನ್ಯಾನ್ ಹಳ್ಳಿಯಲ್ಲಿ ನಡೆದಿದೆ.
ಮೃತರೆಲ್ಲರೂ ಅಸ್ಸಾಂ ಮೂಲದವರು ಎಂದು ತಿಳಿದು ಬಂದಿದೆ. ಅಕ್ರಮವಾಗಿ ರ್ಯಾಟ್ ಹೋಲ್ ಮೈನಿಂಗ್ ನಡೆಸುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಭಂಡಾರಿ ಕ್ಷೇತ್ರದ ಶಾಸಕ ಅಚುಂಬೆಮೊ ಕಿಕೊನ್ ಅವರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರನ್ನು ದಿಮಪುರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅಕ್ರಮ ಕಲ್ಲಿದ್ದಲು ಗಣಿಗಾರಿಕೆಯನ್ನು ತಡೆಯಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಗಣಿ ಇಲಾಖೆಯನ್ನು ಶಾಸಕರು ತಿಳಿಸಿದ್ದಾರೆ.