ನವದೆಹಲಿ, ಎ24(Daijiworld News/SS): ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೆಚ್ಚು ದಿನಗಳಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ 2019ರ ಲೋಕಸಭಾ ಚುನಾವಣಾ ಮಹಾಸಮರ ದೇಶದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೆಚ್ಚು ದಿನಗಳಿಲ್ಲ. ದೇಶದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಬಳಿಕ ರಫೇಲ್ ಡೀಲ್ ಹಗರಣದ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡರು ಹಾಗೂ ಪ್ರಧಾನಿ ನರೇಂದ್ರ ಮೋದಿ ಪ್ರತೀ ಬಾರಿಯೂ ನಿಮ್ಮನ್ನು ಉದ್ದೇಶಿಸಿ ಮಾತನಾಡುವಾಗ ಸುಳ್ಳು ಭರವಸೆ ನೀಡುತ್ತಾರೆ. ಅಂಬಾನಿಗೇಗೆ 30 ಸಾವಿರ ಕೋಟಿ ಹಣ ನೀಡಿದ್ದಾರೆ...? ಅದಕ್ಕೆ ಪ್ರತಿಯಾಗಿ ನಿಮಗೇನು ಅಂಬಾನಿ ಕೊಟ್ಟರು ಅಂತಾ ಬಿಜೆಪಿಯವರ ಬಳಿ ಕೇಳುವುದನ್ನು ಮರೆಯದಿರಿ ಎಂದು ಹೇಳಿದ್ದಾರೆ.
ಅಮೇಥಿ ಬಗ್ಗೆ ಬಿಜೆಪಿ ನಿರ್ಲಕ್ಷ್ಯ ದೋರಣೆ ಹೊಂದಿದ್ದು, ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಹಿಂದೇಟು ಹಾಕುತ್ತಿದೆ. ಆದರೆ ಅಮೇಥಿಯನ್ನು ದೇಶದ ಶೈಕ್ಷಣಿಕ ಕೇಂದ್ರವಾಗಿ ಮಾಡುವುದೇ ತಮ್ಮ ಉದ್ದೇಶ ಎಂದು ತಿಳಿಸಿದರು.
ದೇಶದ ರಕ್ಷಣಾ ಸಚಿವಾಲಯದ ಬಗ್ಗೆ ಮಾತನಾಡುವುದೇ ಬೇಡ. ರಕ್ಷಣಾ ಸಚಿವಾಲಯದಿಂದ ಏನಾಗಿದೆ ಎನ್ನುವುದನ್ನು ಸಂಪೂರ್ಣ ಭಾರತವೇ ನೋಡಿದೆ ಎಂದು ದೂರಿದರು.