ಜ 25 (DaijiworldNews/PC):ದೇಶ ಸೇವೆಯ ಕನಸನ್ನು ಕಂಡಿದ್ದ ಯುವಕನೊಬ್ಬ ಉತ್ತಮ ಸಂಬಳ ಸಿಗುವ ಉದ್ಯೋಗ ತೊರೆದು ತನ್ನ ಕನಸು ನನಸು ಮಾಡಿದ ಯಶೋಗಾಥೆಯನ್ನು ತಿಳಿಯೋಣ.
ಹೌದು ಇವರ ಹೆಸರು ಸ್ವಪ್ನಿಲ್ ವಾಂಖೆಡೆ ಮಹಾರಾಷ್ಟ್ರದ ಮೂಲದ ಅಮರಾವತಿ ಜಿಲ್ಲೆಯ ನಿವಾಸಿ ಯಾಗಿದ್ದ ಇವರು ತನ್ನ ಪದವಿಯನ್ನು ಪೂರ್ಣ ಗೊಳಿಸಿದ ಬಳಿಕ ಇವರು ಮೂರು ವರ್ಷಗಳ ಕಾಲ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದರು.
ಆದರೆ ಈ ಸಾಫ್ಟ್ ವೇರ್ ಇಂಜಿನಿಯರ್ ಉದ್ಯೋಗ ಅವರಿಗೆ ತೃಪ್ತಿಯನ್ನು ನೀಡಲಿಲ್ಲ ಬದಲಿಗೆ ಅವರ ಮನಸ್ಸಿನಲ್ಲಿ ಏನಾದರೂ ಸಾಧಿಸಬೇಕು ಹಾಗೂ ಸಮಾಜಕ್ಕೆ ನಾನು ಏನನ್ನಾದರೂ ಮಾಡಬೇಕು ಎನ್ನುವ ತುಡಿದ ಅವರಲ್ಲಿತ್ತು.
ಬಳಿಕ ಅವರು ನಂತರ ಅವರು ನಾಗರಿಕ ಸೇವೆಗೆ ಸೇರಲು ನಿರ್ಧರಿಸಿದರು. ಕಠಿಣ ಪರಿಶ್ರಮವನ್ನು ಪಟ್ಟರು ತನ್ನ ಸತತ ಪ್ರಯತ್ನದಿಂದ ಅವರು 2013 ರಲ್ಲಿ ಪ್ರಮುಖ ಯಶಸ್ಸನ್ನು ಪಡೆದರು. ಅವರು ಸಹಾಯಕ ಕಮಾಂಡೆಂಟ್ ಹುದ್ದೆಗೆ ಆಯ್ಕೆಯಾದರು. ಬಳಿಕ ಅವರ ಮೂರನೇ ಪ್ರಯತ್ನದಲ್ಲಿ UPSC ಅನ್ನು ಭೇದಿಸಿದರು ಮತ್ತು ಭಾರತೀಯ ಕಂದಾಯ ಸೇವೆಯಲ್ಲಿ ಆದಾಯ ತೆರಿಗೆ ಸಹಾಯಕ ಆಯುಕ್ತರಾದರು.
ನಾಲ್ಕನೇ ಪ್ರಯತ್ನದಲ್ಲಿ UPSC 2015 ರಲ್ಲಿ 132 ನೇ ರ್ಯಾಂಕ್ ಗಳಿಸುವ ಮೂಲಕ ಸ್ವಪ್ನಿಲ್ ಅಂತಿಮವಾಗಿ ಐಎಎಸ್ ಆಗುವಲ್ಲಿ ಯಶಸ್ವಿಯಾದರು. ತಾನು ಕಂಡ ಕನಸನ್ನು ನನಸಾಗಿಸಲು ಎಷ್ಟೇ ಕಷ್ಟ ಬಂದರೂ ಅದನ್ನು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಛಲ ಅವರಲ್ಲಿ ಇದುದ್ದರಿಂದ ಅವರು ಐಎಎಸ್ ಆಗಲು ಸಾಧ್ಯವಾಯಿತು.