ಬೆಂಗಳೂರು , ಜ 25 (DaijiworldNews/PC): ಮೂರು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ವಿಚಾರಕ್ಕೆ ಸದ್ಯಕ್ಕೆ ತಡೆ ಬಿದ್ದಿರಬಹುದು. ಆದರೆ ಲೋಕಸಭೆ ಚುನಾವಣೆ ಬಳಿಕ ಮತ್ತೆ ಈ ವಿಚಾರ ಮುನ್ನೆಲೆಗೆ ಬರುವುದು ಖಚಿತ ಎಂದು ಲೋಕಸಭೆ ಚುನಾವಣೆ ಬಳಿಕ ಮೂರು ಡಿಸಿಎಂ ಬೇಡಿಕೆಯ ಬಗ್ಗೆ ಸತೀಶ್ ಜಾರಕಿಹೊಳಿ ಸುಳಿವನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ ಸೃಷ್ಟಿ ವಿಚಾರದ ಪ್ರಸಾವ ಸದ್ಯಕ್ಕಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸೀಟುಗಳೊಂದಿಗೆ ಗೆಲ್ಲಬೇಕು ಆದ್ದರಿಂದ ಈಗ ಡಿಸಿಎಂ ಕೊಡಿ ಅನ್ನೋದು ಸರಿಯಲ್ಲ. ಲೋಕಸಭೆ ಚುನಾವಣೆ ಬಳಿಕ ಆ ಬೇಡಿಕೆ ಇರಲಿದೆ ಎಂದರು.