ಮೈಸೂರು, ಜ 24 (DaijiworldNews/PC): ನಮ್ಮೂರಲ್ಲಿ, ನಿಮ್ಮೂರಲ್ಲಿ ರಾಮಮಂದಿರ ಇಲ್ವಾ? ನಾವೆಲ್ಲ ರಾಮನನ್ನ ಪೂಜೆ ಮಾಡಲ್ವಾ? ನಾವೆಲ್ಲಾ ಹಿಂದೂಗಳಲ್ವಾ? ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ಆದರೆ ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿ ಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದರು.
ಮೈಸೂರು,ಪಿರಿಯಾಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾವು ಪೂಜಿಸುವ ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ಇರುತ್ತಾರೆ. ಅದಕ್ಕೆ ನಾವು ಸೀತಾರಾಮ ಎಂದು ಕರೆಯುತ್ತೇವೆ. ಆದರೆ ಬಿಜೆಪಿಯವರು ಸೀತೆ, ಲಕ್ಷ್ಮ,ಣ, ಹನುಮಂತನನ್ನು ಬೇರ್ಪಡಿಸಿದ್ದಾರೆ. ರಾಮನನ್ನು ಮಾತ್ರ ಉಳಿಸಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯವರು ಹಿಂದುತ್ವದ ಹೆಸರಲ್ಲಿ ಅಧಿಕಾರ ಹಿಡಿದು ಕುಳಿತಿದ್ದಾರೆ. ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ. ವ್ರತ ಮಾಡುತ್ತಾರಂತೆ. ನಾವು ರಾಮನ ಪೂಜೆ ಮಾಡಲ್ವ? ರಾಮನ ಭಜನೆ ಮಾಡಲ್ವ? ಮೊನ್ನೆ ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟನೆ ಮಾಡಿದೆ. ಜೈ ಶ್ರೀರಾಮ್ ಅಂತ ಘೋಷಣೆ ಕೂಗಿಸಿದೆ. ನನ್ನ ಹೆಸರು ಸಿದ್ದರಾಮಯ್ಯ. ನನ್ನ ಹೆಸರಲ್ಲೇ ರಾಮ ಇದ್ದಾನೆ ನಾವ್ಯಾರೂ ಹಿಂದೂಗಳು ಅಲ್ವಾ? ಬಿಜೆಪಿಯವರು ಭಾವನೆಗಳ ಮೇಲೆ ಮತ ಕೇಳುತ್ತಾರೆ ಆದ್ದರಿಂದ ಅವರನ್ನು ನಂಬಬೇಡಿ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.