ದೆಹಲಿ,ಜ 24 (DaijiworldNews/PC): ಪ್ರಧಾನಿ ನರೇಂದ್ರ ಮೋದಿ ಅವರು ಡಿ.25 ರಿಂದ ತಮ್ಮ ಮೂರನೇ ಅವಧಿಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದು, ಚುನಾವಣೆ ಪ್ರಚಾರಣೆ ಆರಂಭಿಸಲಿದ್ದಾರೆ.
ತಮ್ಮ ಲೋಕಸಭಾ ಚುನಾವಣಾ ಪ್ರಚಾರವನ್ನು ಪಶ್ಚಿಮ ಉತ್ತರ ಪ್ರದೇಶದ ಬುಲಂದ್ಶಹರ್ನಿಂದ ಪ್ರಾರಂಭಿಸಲಿದ್ದಾರೆ ಎಂದು ಮಾಹಿತಿ ದೊರೆತಿದ್ದು ಸುಮಾರು 5 ಲಕ್ಷ ಜನರು ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ, 2019ರಲ್ಲಿ 80ರಲ್ಲಿ 62 ಸ್ಥಾನಗಳನ್ನು ಗೆದ್ದಿದ್ದರೂ ಅಲ್ಪ ಹಿನ್ನಡೆ ಕಂಡಿತ್ತು.
ಆರು ಕ್ಷೇತ್ರಗಳಲ್ಲಿ ಸೋಲು ಕಂಡಿದ್ದ ಪಕ್ಷಕ್ಕೆ ಪಶ್ಚಿಮ ಉತ್ತರ ಪ್ರದೇಶ ಈಗ ಬಿಜೆಪಿಗೆ ಸವಾಲಾಗಿದ್ದು ಹಾಗಾಗಿ ಅಲ್ಲಿಂದಲೇ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.
ಜ. 25 ರಂದು ನರೇಂದ್ರ ಮೋದಿ ಅವರು ಪಶ್ಚಿಮ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ 19,100 ಕೋಟಿ ರೂ.ಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಗುರುವಾರ ಚಾಲನೆ ನೀಡಲಿದ್ದಾರೆ.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಎರಡು ನಿಲ್ದಾಣಗಳಿಂದ ಸರಕು ರೈಲುಗಳನ್ನು ಫ್ಲ್ಯಾಗ್ ಮಾಡುವ ಮೂಲಕ ಮೀಸಲಾದ ಸರಕು ಸಾಗಣೆ ಕಾರಿಡಾರ್ ಯಲ್ಲಿ ನ್ಯೂ ಖುರ್ಜಾ ಮತ್ತು ನ್ಯೂ ರೇವಾರಿ ನಡುವಿನ 173-ಕಿಮೀ ಉದ್ದದ ಡಬಲ್-ಲೈನ್ ಎಲೆಕ್ಟ್ರಿಫೈಡ್ ವಿಭಾಗವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.